ಬಿಗ್ ಬಾಸ್ ನಿಂದ ಹೊರಬಂದ ಬೆನ್ನಲ್ಲೇ ರಘು ಗೌಡಗೆ ಸಿನಿಮಾ ಆಫರ್

ಮಂಗಳವಾರ, 11 ಮೇ 2021 (09:49 IST)
ಬೆಂಗಳೂರು: ಕೊರೋನಾ ಕಾರಣದಿಂದ ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿ ಅರ್ಧಕ್ಕೇ ಮುಕ್ತಾಯ ಕಾಣುತ್ತಿದೆ. ಹಾಗಿದ್ದರೂ ಸ್ಪರ್ಧಿ ರಘು ಗೌಡ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.


ಬಿಗ್ ಬಾಸ್ ನಿಂದ ಹೊರಗೆ ಬರುತ್ತಿದ್ದಂತೇ ರಘುಗೆ ಸಿನಿಮಾ ಆಫರ್ ಒಂದು ಸಿಕ್ಕಿದೆ. ಶ್ರೀವತ್ಸ ಆರ್. ನಿರ್ದೇಶನ ಮಾಡಲಿರುವ ಕ್ರೈಂ ಥ್ರಿಲ್ಲರ್ ಒಂದರಲ್ಲಿ ರಘು ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ರಘು ಜೊತೆಗೆ ಚಂದು ಗೌಡ, ಸತ್ಯಾಶ್ರಯ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಯೂ ಟ್ಯೂಬರ್ ಆಗಿದ್ದ ರಘು ಪರ್ಫಾರ್ಮೆನ್ಸ್ ನೋಡಿ ಶ್ರೀವತ್ಸ ಈ ಆಫರ್ ನೀಡಿದ್ದಾರಂತೆ. ಹೀಗಾಗಿ ಬಿಗ್ ಬಾಸ್ ಗೆ ಹೋಗುವ ಮೊದಲೇ ಈ ಸಿನಿಮಾಗೆ ಅವರು ಫಿಕ್ಸ್ ಆಗಿದ್ದರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ