ಹಿರಿಯ ನಟಿ ಉಮಾಶ್ರೀ ಕೊಟ್ಟ ಆ ಬಿಗ್ ಸರ್ಪ್ರೈಸ್ ಏನು ಗೊತ್ತಾ?
ಸೋಮವಾರ, 16 ಡಿಸೆಂಬರ್ 2019 (10:17 IST)
ಬೆಂಗಳೂರು: ನಟಿ ಉಮಾಶ್ರೀಯನ್ನು ಹಾಸ್ಯ ಕಲಾವಿದೆಯಾಗಿ, ಅಮ್ಮನ ಪಾತ್ರಧಾರಿಯಾಗಿ ಬೆಳ್ಳಿ ತೆರೆಯಲ್ಲಿ, ಕಿರುತೆರೆಯಲ್ಲಿ ನೋಡಿ ನಮಗೆ ಗೊತ್ತು. ಆದರೆ ಕೆಲವು ದಿನಗಳ ಬ್ರೇಕ್ ನ ನಂತರ ಉಮಾಶ್ರೀ ಹೊಸ ಸುದ್ದಿ ಕೊಟ್ಟಿದ್ದಾರೆ.
ಕಿರುತೆರೆಯಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಆರತಿಗೊಬ್ಬ, ಕೀರುತಿಗೊಬ್ಬ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಸುದ್ದಿಯ ಬೆನ್ನಲ್ಲೇ ಉಮಾಶ್ರೀ ಅದಕ್ಕಿಂತ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ.
ಉಮಾಶ್ರೀ ಇದೀಗ ನಿರೂಪಕಿಯಾಗುತ್ತಿದ್ದಾರೆ! ಹೌದು, ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ ಶೋ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮಕ್ಕೆ ಉಮಾಶ್ರೀ ನಿರೂಪಕಿಯಾಗುತ್ತಿದ್ದಾರೆ. ಈ ಮೊದಲು ಈ ಕಾರ್ಯಕ್ರಮವನ್ನು ಶಾಲಿನಿ ನಿರೂಪಿಸುತ್ತಿದ್ದರು. ಈ ಬಾರಿ ಉಮಾಶ್ರೀ ಆ ಕೆಲಸ ಮಾಡಲಿದ್ದಾರೆ. ಅಂತೂ ಹಿರಿಯ ಕಲಾವಿದೆಗೆ ಇದು ಹೊಸ ಇನಿಂಗ್ಸ್ ಎಂದರೂ ತಪ್ಪಾಗಲಾರದು. ಸದ್ಯದಲ್ಲೇ ಶೋ ಆರಂಭವಾಗಲಿದೆ.