ಬೆಂಗಳೂರು: ಸಾಮಾನ್ಯವಾಗಿ ಸಿನಿಮಾ ಮೊದಲು ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಬಳಿಕ ಕಿರುತೆರೆಯಲ್ಲಿ ಪ್ರಸಾರವಾಗುತ್ತದೆ. ಆದರೆ ವಿಜಯ್ ರಾಘವೇಂದ್ರ ನಾಯಕರಾಗಿರುವ ಈ ಸಿನಿಮಾ ಈ ಲೆಕ್ಕಾಚಾರವನ್ನು ಉಲ್ಟಾ ಪಲ್ಟಾ ಮಾಡಿದೆ.
ವಿಜಯ್ ನಟಿಸಿರುವ ಸೀತಾರಾಮ್ ಬಿನೋಯ್ ಸಿನಿಮಾ ಆಗಸ್ಟ್ 15 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಮೂಲಕ ತೆರೆ ಕಾಣಲಿದೆ. ಇದಾದ ಬಳಿಕ ಮರುದಿನದಿಂದ ಅಂದರೆ ಆಗಸ್ಟ್ 16 ರಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.
ಈ ಮೂಲಕ ಕಿರುತೆರೆಯಲ್ಲೇ ನೇರವಾಗಿ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದುವರೆಗೆ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗುವ ಟ್ರೆಂಡ್ ಇತ್ತು. ಆದರೆ ಕಿರುತೆರೆಯಲ್ಲೇ ಬಿಡುಗಡೆಯಾಗುತ್ತಿರುವುದು ವಿಶೇಷ.