ಸಲಗ ಹಾಡು ರಿಲೀಸ್ ಮಾಡಲಿರುವ ಶಿವರಾಜ್ ಕುಮಾರ್

ಭಾನುವಾರ, 1 ಆಗಸ್ಟ್ 2021 (10:37 IST)
ಬೆಂಗಳೂರು: ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ ಹಾಗೂ ನಾಯಕರಾಗಿ ನಟಿಸಿರುವ ಸಿನಿಮಾ ‘ಸಲಗ’. ಈ ಸಿನಿಮಾದ ವಿಶೇಷ ಹಾಡೊಂದನ್ನು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರಿಲೀಸ್ ಮಾಡಲಿದ್ದಾರೆ.


ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ವಿಶೇಷ ಥೀಮ್ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹಾಡು ಆಗಸ್ಟ್ 5 ರಂದು ರಿಲೀಸ್ ಆಗಲಿದ್ದು, ಶಿವರಾಜ್ ಕುಮಾರ್ ಲಾಂಚ್ ಮಾಡಲಿದ್ದಾರೆ.

ಈಗಾಗಲೇ ಸಲಗ ಚಿತ್ರತಂಡ ಶಿವಣ್ಣನನ್ನು ಭೇಟಿಯಾಗಿ ಹಾಡಿನ ಬಿಡುಗಡೆ ಮಾಡಲು ಖುದ್ದಾಗಿ ಆಹ್ವಾನ ನೀಡಿತ್ತು. ಚರಣ್ ರಾಜ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಗೀತಾ ಮತ್ತು ಗಿರಿಜಾ ಸಿದ್ಧಿ ಧ‍್ವನಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ