ಮದುವೆ ಬಳಿಕ ಮತ್ತೆ ವಿಜಯ್ ಸೂರ್ಯ ಭರ್ಜರಿ ಕಮ್ ಬ್ಯಾಕ್!

ಗುರುವಾರ, 4 ಏಪ್ರಿಲ್ 2019 (10:15 IST)
ಬೆಂಗಳೂರು: ಮದುವೆ ಆಗಿದ್ದೇ ಆಗಿದ್ದು, ವಿಜಯ್ ಸೂರ್ಯ ಅಲಿಯಾಸ್ ಅಗ್ನಿಸಾಕ್ಷಿ ಸಿದ್ಧಾರ್ಥ್ ತೆರೆ ಮೇಲೆ ಕಾಣಿಸ್ತಾನೇ ಇಲ್ಲ ಎನ್ನುವ ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.


ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವಿಜಯ್ ಸೂರ್ಯ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ. ಆದರೆ ತಲೆಗೆ ಏಟು ಮಾಡಿಕೊಂಡಂತೆ ಬ್ಯಾಂಡೇಜ್ ಸುತ್ತಿಕೊಂಡಿರುವ ವಿಜಯ್ ಅವತಾರ ನೋಡಿ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು, ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗು ಮಜಾ ಟಾಕೀಸ್ ಯುಗಾದಿ ವಿಶೇಷ ಸಂಚಿಕೆಯಲ್ಲಿ ವಿಜಯ್ ಸೂರ್ಯ ತಮ್ಮ ಪತ್ನಿ ಚೈತ್ರಾ ಜತೆಗೆ ಕಾಣಿಸಿಕೊಳ್ಳಲಿದ್ದಾರಂತೆ. ಆ ಮೂಲಕ ಮೊದಲ ಬಾರಿಗೆ ಪತ್ನಿ ಜತೆಗೆ ಅಭಿಮಾನಿಗಳ ಎದುರು ಬರಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ