ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಮೂಡಿಬರುತ್ತಿರುವ ಅಗ್ನಿಸಾಕ್ಷಿ ಧಾರವಾಹಿ ಇದೀಗ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ನಾಯಕ ಸಿದ್ಧಾರ್ಥ್ ರಿಯಲ್ ಲೈಫ್ ನಲ್ಲಿ ಮದುವೆಯಾದ ಮೇಲೆ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ನಾಯಕಿ ಸನ್ನಿಧಿ ಆಸ್ಪತ್ರೆ ಸೇರಿರುವ ಫೋಟೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಲೆಗೆ ಪೆಟ್ಟು ಮಾಡಿಕೊಂಡು ಬ್ಯಾಂಡೇಜ್ ಸುತ್ತಿಕೊಂಡು ಸನ್ನಿಧಿ ಆಸ್ಪತ್ರೆ ಬೆಡ್ ನಲ್ಲಿ ನಗುತ್ತಾ ಮಲಗಿರುವ ಫೋಟೋ ಒಂದನ್ನು ಅಗ್ನಿಸಾಕ್ಷಿ ಫ್ಯಾನ್ ಪೇಜ್ ಇನ್ ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದೆ. ಈ ಫೋಟೋ ನೋಡಿ ಹಲವರು ಸನ್ನಿಧಿಗೆ ನಿಜವಾಗಿಯೂ ಆಕ್ಸಿಡೆಂಟ್ ಆಯ್ತೇನೋ ಎನ್ನುವಂತೆ ಕಾಳಜಿಯಿಂದ ಮೆಸೇಜ್ ಮಾಡುತ್ತಿದ್ದಾರೆ.
ಆದರೆ ಇದೆಲ್ಲಾ ಶೂಟಿಂಗ್ ಭಾಗವಾಗಿದ್ದು, ಮುಂದಿನ ಸಂಚಿಕೆಯಲ್ಲಿ ಸನ್ನಿಧಿಗೆ ಆಕ್ಸಿಡೆಂಟ್ ಆಗುವ ಸನ್ನಿವೇಶವಿರುವುದು ಪಕ್ಕಾ ಆಗಿದೆ. ಈಗಾಗಲೇ ರಾಧಿಕಾಗೆ ನಿಜ ವಿಚಾರ ಗೊತ್ತಾಗಿದ್ದು, ವಿಲನ್ ಚಂದ್ರಿಕಾ ಆಟಕ್ಕೆ ತೆರೆ ಬಿದ್ದಿದೆ. ಸಿದ್ಧಾರ್ಥ್ ಎಲ್ಲಿದ್ದಾನೋ ಗೊತ್ತಿಲ್ಲ. ಆದರೆ ಇದೀಗ ಸನ್ನಿಧಿಗೂ ಏಟು ಮಾಡಿಕೊಂಡು ಮಲಗಿರುವ ಫೋಟೋ ನೋಡಿ ಅಭಿಮಾನಿಗಳು ಏನಾಗುತ್ತೋ ಎಂದು ಕಾಯುವಂತೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ