ಬಿಗ್ ಬಾಸ್ ನಲ್ಲಿ ಅಶ್ಲೀಲತೆಗೆ ಕಡಿವಾಣ ಹಾಕಲು ಮುಂದಾಗುತ್ತಾ ಕೇಂದ್ರ ಸರ್ಕಾರ?
ಈ ವೇಳೆ ಇಂತಹ ದೃಶ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಿಂದ ಬಿಗ್ ಬಾಸ್ ಪ್ರಸಾರಕ್ಕೆ ಮುನ್ನ ಸೆನ್ಸಾರ್ ಆಗುವಂತೆ ನೋಡಿಕೊಳ್ಳಬೇಕು ಎಂದು ಆಂಧ್ರ ಹೈಕೋರ್ಟ್ ಕೇಂದ್ರ ಸರ್ಕಾರ, ಮಾ ಟಿವಿ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬಿಗ್ ಬಾಸ್ ಒಟಿಟಿ ಸೀಸನ್ ಆರಂಭವಾದ ಮೇಲೆ ಅಶ್ಲೀಲ ಸನ್ನಿವೇಶಗಳು ಎಗ್ಗಿಲ್ಲದೇ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ನಲ್ಲಿ ಲಿಪ್ ಕಿಸ್, ಮಹಿಳಾ ಸ್ಪರ್ಧಿಗಳೊಂದಿಗೆ ಅನುಚಿತ ವರ್ತನೆ ಸಾಮಾನ್ಯವಾಗಿದೆ. ಕನ್ನಡ ಬಿಗ್ ಬಾಸ್ ನಲ್ಲಿ ಇದುವರೆಗೆ ಇದು ನಡೆದಿಲ್ಲವಾದರೂ ಕೆಲವೊಂದು ಅತಿರೇಕದ ವರ್ತನೆ ನೋಡುಗರಿಗೆ ಮುಜುಗರ ತಂದಿದ್ದು ನಿಜ. ಹೀಗಾಗಿ ಕೇಂದ್ರ ಸರ್ಕಾರ ಕೋರ್ಟ್ ಸೂಚನೆಯಂತೆ ಬಿಗ್ ಬಾಸ್ ಗೆ ಸೆನ್ಸಾರ್ ತಂದರೆ ಇಂತಹದ್ದಕ್ಕೆ ಕಡಿವಾಣ ಬೀಳಲಿದೆ.