ಬಟ್ಟೆ ಬಗ್ಗೆ ಮಾತನಾಡಿದ್ದಕ್ಕೆ ವಯಸ್ಸಾದ ವ್ಯಕ್ತಿ ಜೊತೆ ನಟಿ ಉರ್ಫಿ ಜಾವೇದ್ ಜಗಳ

ಮಂಗಳವಾರ, 25 ಜುಲೈ 2023 (16:00 IST)
Photo Courtesy: Twitter
ಮುಂಬೈ: ಬಾಲಿವುಡ್ ನಟಿ ಉರ್ಫಿ ಜಾವೇದ್ ಚಿತ್ರ-ವಿಚಿತ್ರ ಉಡುಪುಗಳ ಮೂಲಕ ಜನರ ಗಮನ ಸೆಳೆಯುತ್ತಿರುತ್ತಾರೆ. ಆದರೆ ಆಕೆಯ ತುಂಡುಡುಗೆ ಬಗ್ಗೆ ಹಿರಿಯ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಪ್ರಶ್ನೆ ಮಾಡಿದ್ದು ಉರ್ಫಿ ಸಿಟ್ಟಿಗೆ ಕಾರಣವಾಗಿದೆ.

ವಿಮಾನ ನಿಲ್ದಾಣದಲ್ಲಿ ತಮ್ಮ ಗೆಳತಿ ಜೊತೆ ಹೋಗುತ್ತಿದ್ದಾಗ ಎದುರಾದ ಹಿರಿಯ ವ್ಯಕ್ತಿಯೊಬ್ಬರು ಯಾಕೆ ಇಂತಹ ಬಟ್ಟೆ ಹಾಕಿ ಭಾರತದ ಹೆಸರು ಹಾಳು ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದ್ದಾರೆ. ಈ ವ್ಯಕ್ತಿಯ ಜೊತೆ ಉರ್ಫಿ ಉರಿದುಬಿದ್ದಿದ್ದಾರೆ.

‘ನಾನು ನಿನ್ನ ಮಗಳಾ? ಅಲ್ಲ ತಾನೇ? ನನಗೆ ಬುದ್ದಿ ಹೇಳಲು ಬರಬೇಡಿ’ ಎಂದು ಕಾದಾಟಕ್ಕಿಳಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ