ಅವಳಿ ಜವಳಿಗಳಿಗೆಂದೇ ಜೀ ಕನ್ನಡದಲ್ಲಿ ಹೊಸ ಶೋ

ಬುಧವಾರ, 1 ಜನವರಿ 2020 (09:02 IST)
ಬೆಂಗಳೂರು: ಜನಪ್ರಿಯ ಕನ್ನಡ ವಾಹಿನಿ ಜೀ ಕನ್ನಡ ಅವಳಿ ಜವಳಿಗಳಿಗೆಂದೇ ಹೊಸದೊಂದು ರಿಯಾಲಿಟಿ ಶೋ ಹೊರತರುತ್ತಿದೆ.


‘ಜೀನ್ಸ್’ ಎನ್ನುವ ಗೇಮ್ ಶೋ ಸದ್ಯದಲ್ಲೇ ಆರಂಭವಾಗಲಿದೆ. ಈ ಬಗ್ಗೆ ವಾಹಿನಿ ಕೆಲವು ದಿನಗಳ ಮೊದಲೇ ಪ್ರಕಟಣೆ ನೀಡಿತ್ತಲ್ಲದೆ, ಪ್ರೋಮೋಗಳನ್ನೂ ಬಿಟ್ಟಿತ್ತು.

ಇದೀಗ ಆ ಗೇಮ್ ಶೋನಲ್ಲಿ ಪಾಲ್ಗೊಳ್ಳಲು ನೋಡಲು ಒಂದೇ ಥರ ಇರುವ ಅವಳಿ ಜವಳಿಗಳಿಗೆ ಅವಕಾಶ ನೀಡಿದೆ. ನಿಮ್ಮಲ್ಲಿ ಯಾರಾದರೂ ಅವಳಿ ಜವಳಿಗಳಿದ್ದರೆ, ಈ ಶೋನಲ್ಲಿ ಭಾಗವಹಿಸಬಹುದು. ಹಿರಿಯ ನಿರೂಪಕಿ ಸುಷ್ಮಾ ರಾವ್ ಈ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂಬ ಸುದ್ದಿಯಿದೆ. ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ