ಮುಂಬೈ : ಓಮಿಕ್ರಾನ್ ಪ್ರಕರಣಗಳು ದಿಢೀರ್ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಜ.15ರವರೆಗೆ 144 ಸೆಕ್ಷನ್ ವಿಸ್ತರಿಸಲಾಗಿದೆ.
ಮುಂಬೈ ಪೊಲೀಸರು ಈ ಹಿಂದೆ ಡಿಸೆಂಬರ್ 30 ರಿಂದ ಜನವರಿ 7 ರವರೆಗೆ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದರು. ಆದರೆ ಪ್ರತಿದಿನವೂ ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಿದೆ
ಈ ಆದೇಶದ ಹಿನ್ನೆಲೆಯಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಆದೇಶ ಉಲ್ಲಂಘಿಸಿದರ ಮೇಲೆ ಕೇಸ್ ಹಾಕಲಾಗುತ್ತದೆ.
ಮುಂಬೈ ಪೊಲೀಸರು ಈಗಾಗಲೇ ತೆರೆದ ಮೈದಾನಗಳು, ಬಿಚ್ಗಳು, ವಾಯುವಿಹಾರಗಳು, ಉದ್ಯಾನವನಗಳಿಗೆ ಸಂಬಧಪಟ್ಟಂತೆ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಸಂಜೆ 5 ರಿಂದ ಬೆಳಿಗ್ಗೆ 5 ರವರೆಗೆ ಭೇಟಿ ನೀಡುವುದನ್ನು ಸಹ ನಿಷೇಧಿಸಿದ್ದಾರೆ.
ಬೃಹತ್ ಮುಂಬೈ ನಿಗಮ (ಬಿಎಮ್ಸಿ)ಯು ಇದೇ ಡಿಸೆಂಬರ್ 30 ರಿಂದ ಜನವರಿ 7 ರವರೆಗೆ ರೆಸ್ಟೋರೆಂಟ್, ಹೋಟೆಲ್, ಬಾರ್, ಪಬ್, ರೆಸಾರ್ಟ್, ಕ್ಲಬ್ಗಳಲ್ಲಿ ಹೊಸ ವರ್ಷದ ಆಚರಣೆಗಳು ಮತ್ತು ಯಾವುದೇ ಖಾಸಗಿ ಪಾರ್ಟಿ ಆಯೋಜನೆಗೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ.
ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಮದುವೆ, ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಂತ್ಯಕ್ರಿಯೆಗಳಲ್ಲಿ ಜನರು ಭಾಗವಹಿಸುವುದಕ್ಕೆ ನಿರ್ಬಂಧಗಳನ್ನು ಹೇರಿದೆ.