2 ಕೋಟಿ ಜನಕ್ಕೆ ಕೋವಿಡ್ ಪರೀಕ್ಷೆಗೆ ಆದೇಶ!

ಬುಧವಾರ, 27 ಏಪ್ರಿಲ್ 2022 (09:37 IST)
ಬೀಜಿಂಗ್ : ಸೋಮವಾರ ಬೀಜಿಂಗ್ ನಗರದ ಒಂದು ನಿರ್ದಿಷ್ಟಭಾಗದ 35 ಲಕ್ಷ ಜನರಿಗೆ ನಡೆಸಿದ ನ್ಯೂಕ್ಲಿಕ್ ಆ್ಯಸಿಡ್ ಪರೀಕ್ಷೆಯಲ್ಲಿ 32 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಈ ಹಿನ್ನೆಲೆಯಲ್ಲಿ ಬೀಜಿಂಗ್ ನಗರದ ಎಲ್ಲಾ 2 ಕೋಟಿ ಜನರೂ ಕೋವಿಡ್ ಪರೀಕ್ಷೆಗೆ ಹಾಜರಾಗುವಂತೆ ಸರ್ಕಾರ ಆದೇಶಿಸಿದೆ. ಇದೇ ವೇಲೆ, ಚೀನಾದ ಪ್ರಮುಖ ವಾಣಿಜ್ಯ ನಗರ ಶಾಂಘೈನಲ್ಲಿ 52 ಸೋಂಕಿತರು ಸಾವಿಗೀಡಾಗಿದ್ದು, ಹೊಸದಾಗಿ ಸೋಂಕು ಹರಡಲು ಆರಂಭಿಸಿದ ನಂತರ 190 ಜನರು ಸಾವಿಗೀಡಾದಂತಾಗಿದೆ.

ಒಮಿಕ್ರೋನ್ ರೂಪಾಂತರಿಯೊಂದಿಗೆ ಹೋರಾಡುತ್ತಿರುವ ಬೀಜಿಂಗ್ ಮಂಗಳವಾರದಿಂದ ಎಲ್ಲಾ 11 ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.

ಸುಮಾರು 35 ಲಕ್ಷ ಜನರಿರುವ ಬೀಜಿಂಗ್ನ ಚಾವೋಯಂಗ್ ಜಿಲ್ಲೆಯಲ್ಲಿ ಸೋಮವಾರ ಮೂರು ಸುತ್ತುಗಳ ನ್ಯೂಕ್ಲಿಕ್ ಆ್ಯಸಿಡ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 32 ಪ್ರಕರಣಗಳು ಪತ್ತೆಯಾಗಿದ್ದವು. ಈ ಪರೀಕ್ಷೆಯನ್ನು ಮುಂದಿನ ಬುಧವಾರ ಮತ್ತು ಶುಕ್ರವಾರವೂ ನಡೆಸಲಾಗುತ್ತದೆ ಎಂದು ಆಡಳಿತ ಹೇಳಿದೆ.

ಶಾಂಘೈನಲ್ಲಿ ಸೋಮವಾರ 15,816 ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 52 ಸೋಂಕಿತರು ಸಾವಿಗೀಡಾಗಿದ್ದಾರೆ. ಅಲ್ಲದೇ ಜಿಯಾಂಕ್ಸಿಯಲಿ 91, ಜಿಲಿನ್ನಲ್ಲಿ 44 ಪ್ರಕರಣಗಳು ಹೊಸದಾಗಿ ದಾಖಲಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ