ಕೊರೊನಾ ಪ್ರಕರಣದಲ್ಲಿ ಭಾರಿ ಇಳಿಕೆ

ಶನಿವಾರ, 29 ಜನವರಿ 2022 (06:17 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯತ್ತ ಮುಖಮಾಡಿದೆ. ಕಳೆದ ಮೂರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಇಳಿಕೆ ಆಗ್ತಿದೆ.

 
ರಾಜ್ಯದಲ್ಲಿಂದು 1.49 ಲಕ್ಷ ಟೆಸ್ಟ್ ನಡೆಸಲಾಗಿದ್ದು, 31,198 ಕೇಸ್ ಬಂದಿದೆ. ಬೆಂಗಳೂರಿನಲ್ಲಿ 15,199 ಮಂದಿಗೆ ಸೋಂಕು ತಗುಲಿದೆ. ಮೈಸೂರು, ತುಮಕೂರು, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಒಂದು ಸಾವಿರಕ್ಕಿಂತ ಹೆಚ್ಚು ಪ್ರಕರಣ ನಮೂದಾಗಿವೆ. ಉಳಿದ ಕಡೆ ಸೋಂಕು ಕಡಿಮೆ ಆಗ್ತಾ ಇದೆ.

ಜನವರಿ 25ರಂದು ಏಳು ಮಂದಿ, ಜನವರಿ 26ರಂದು ಆರು ಮಂದಿ, ಜನವರಿ 27ರಂದು ಅಂದ್ರೆ ನಿನ್ನೆ ಒಬ್ಬರು ಸೋಂಕಿಗೆ ಬಲಿ ಆಗಿರುವುದನ್ನು ಇವತ್ತಿನ ಬುಲೆಟಿನ್ನಲ್ಲಿ ಉಲ್ಲೇಖಿಸಲಾಗಿದೆ. ಉಳಿದ 36 ಮಂದಿ ಜನವರಿ 9ರಿಂದ ಜನವರಿ 24ರವರೆಗೂ ಸಾವನ್ನಪ್ಪಿದವರಾಗಿದ್ದಾರೆ.

ಸಮಾಧಾನದ ಸಂಗತಿ ಅಂದ್ರೆ ಚೇತರಿಸಿಕೊಂಡವರ ಸಂಖ್ಯೆ ಹೊಸ ಕೇಸ್ಗಿಂತ ದುಪ್ಪಟ್ಟಿದೆ. ಇಂದು ಬರೋಬ್ಬರಿ 71,092 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೇಸ್ಗಳ ಸಂಖ್ಯೆ 2.88 ಲಕ್ಷಕ್ಕೆ ಕುಸಿದಿದೆ.

ಹೊಸ ಕೇಸ್ಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಿದೆ. ನಿನ್ನೆ 3.47 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಕೇಸ್ 21 ಲಕ್ಷಕ್ಕೆ ಇಳಿದಿದೆ. ಇನ್ನು, ಕೋವಿಡ್ ನಿರೋಧಿಸಲು ಮೂಗಿನ ಮೂಲಕ ತೆಗೆದುಕೊಳ್ಳುವ ಕೊವ್ಯಾಕ್ಸಿನ್ ಇಂಟ್ರಾನಾಸಲ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲು ಅಂತಿಮ ಹಂತದ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ಗೆ ಡಿಸಿಜಿಐ ಅನುಮತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ