ಅಮರನಾಥ ಯಾತ್ರಾ ತಾತ್ಕಾಲಿಕ ಸ್ಥಗಿತ!

ಮಂಗಳವಾರ, 5 ಜುಲೈ 2022 (15:23 IST)
ಶ್ರೀನಗರ : ಪರಿಸರದಲ್ಲಿ ಪ್ರತಿಕೂಲ ವಾತಾವರಣ ಉಂಟಾಗಿರುವುದರಿಂದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಪಹಲ್ಗಾಮ್ನ ನುನ್ವಾನ್ ಶಿಬಿರದಿಂದ ಪವಿತ್ರ ಗುಹೆಯತ್ತ ತೆರಳಲು ಯಾತ್ರಾರ್ಥಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಕಳೆದ ಗುರುವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮೂಲ ಶಿಬಿರವನ್ನು ತಲುಪಿತ್ತು. ಕೋವಿಡ್ ಕಾರಣದಿಂದಾಗಿ ಸತತ ಎರಡು ವರ್ಷ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಈ ಬಾರಿ ಮತ್ತೆ ಆರಂಭವಾಗಿತ್ತು.

ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ ಸ್ವಾಭಾವಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗವನ್ನು ಹೊಂದಿರುವ ಗುಹಾ ದೇಗುಲ ಜಗತ್ಪ್ರಸಿದ್ಧವಾಗಿದೆ. ಯಾತ್ರಿಕರು ಬಹುತೇಕ ಕಾಲ್ನಡಿಗೆಯಲ್ಲೇ ಪ್ರಯಾಣಿಸುತ್ತಾರೆ. 

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು ಬೇಸ್ ಕ್ಯಾಂಪ್ನಿಂದ 4,890 ಯಾತ್ರಾರ್ಥಿಗಳ ಮೊದಲ ಬ್ಯಾಚ್ಗೆ ಚಾಲನೆ ನೀಡಿದ್ದರು. ಅಮರನಾಥ ದೇಗುಲ ಮಂಡಳಿ (ಎಸ್ಎಎಸ್ಬಿ) ಸಹ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಆನ್ಲೈನ್ ದರ್ಶನಕ್ಕೆ ಅವಕಾಶ ಕಲ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ