ಆಯುರ್ವೇದ vs ಅಲೋಪಥಿ; ಎರಡು ವಿಭಿನ್ನ ಪದ್ದತಿಯ ಚಿಕಿತ್ಸೆ, ತಾರತಮ್ಯ ಸಲ್ಲದು; ಸುಪ್ರೀಂ ಕೋರ್ಟ್
ಬುಧವಾರ, 4 ಆಗಸ್ಟ್ 2021 (08:05 IST)
ನವದೆಹಲಿ(ಆ.04): ಆಯುರ್ವೇದವೋ ಅಥವಾ, ಅಲೋಪಥಿಯೋ? ಈ ಹಗ್ಗಜಗ್ಗಾಟ ಭಾರತದಲ್ಲಿ ನಡೆಯುತ್ತಲೇ ಇದೆ. ಕಳೆದ ಕೆಲ ತಿಂಗಳುಗಳಿಂದ ಈ ಹೋರಾಟಕ್ಕೆ ಕೊಂಚ ವೇಗ ಸಿಕ್ಕಿತ್ತು. ಇದೀಗ ಆಯುರ್ವೇದ ಹಾಗೂ ಅಲೋಪಥಿ ನಡುವಿನ ಮುಸುಕಿನ ಗುದ್ದಾಟಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ನೀಡಿದೆ.
•ಅಲೋಪಥಿ ಹಾಗೂ ಆಯುರ್ವೇದ ಗುದ್ದಾಟಕ್ಕೆ ಬ್ರೇಕ್ ನೀಡಿದ ಸುಪ್ರೀಂ
•ಅಲೋಪತಿ ವೈದ್ಯರು ತಾರತಮ್ಯ ಮಾಡಬಾರದು ಎಂದ ಕೋರ್ಟ್
•ಆಯುಷ್ ವೈದ್ಯರು ನಿವೃತ್ತಿ ಹೆಚ್ಚಿಸಲು ಅರ್ಹರು
ಅಸಮಂಜಸವಾದ ವರ್ಗೀಕರಣ ಮತ್ತು ಅದರ ಆಧಾರದ ಮೇಲೆ ತಾರತಮ್ಯ ಸಲ್ಲದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಯುಷ್ ಅಡಿಯಲ್ಲಿನ ಆಯುರ್ವೇದ ವೈದ್ಯರು ನಿವೃತ್ತಿ ವಯಸ್ಸನ್ನು 60 ರಿಂದ 65 ವರ್ಷಕ್ಕೆ ಹೆಚ್ಚಿಸಲು ಅರ್ಹರು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಪೀಠ ಹೇಳಿದೆ.
ಆಯುಷ್ ಹಾಗೂ ಅಲೋಪಥಿ ಪದ್ದತಿಗಳಲ್ಲಿ ಒಂದೇ ವ್ಯತ್ಯಾಸವಿದೆ. ಆಯುಷ್ ವೈದ್ಯರು ಆಯುರ್ವೇದ, ಯುನಾನಿ, ಮತ್ತು ಸ್ಥಳೀಯ ವೈದ್ಯಕೀಯ ಪದ್ಧತಿಗಳನ್ನು ಬಳಸುತ್ತಿದ್ದಾರೆ. ಅಲೋಪಥಿ ವೈದ್ಯರು ತಮ್ಮದೇ ಆದ ವಿಧಾನದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ವರ್ಗೀಕರಣ ತಾರತಮ್ಯ ಸಲ್ಲದು. ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎರಡೂ ವಿಭಾಗಗಳ ಅಡಿಯಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಮತ್ತು ಗುಣಪಡಿಸುವ ಒಂದೇ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಕೋರ್ಟ್ ಹೇಳಿದೆ.
ಆಯುಷ್ ಅಡಿಯಲ್ಲಿ ಆಯುರ್ವೇದಿಕ್ ವೈದ್ಯರು 65 ವರ್ಷ ವಯೋಮಾನದ ಅಥವಾ ಅಧಿಕ ವಯೋಮಾನದ ವೈದ್ಯರು ಪ್ರಯೋಜನಕ್ಕೆ ಅರ್ಹರು ಎಂಬ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ತೀರ್ಪಿನ ವಿರುದ್ಧ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿದೆ.