ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್!

ಸೋಮವಾರ, 28 ಮಾರ್ಚ್ 2022 (13:50 IST)
ಬೀಜಿಂಗ್ : ಚೀನಾದಲ್ಲಿ ಕೊರೊನಾ ಆರ್ಭಟ ಮುಂದುವರಿಯುತ್ತಿದ್ದು, 26 ಮಿಲಿಯನ್ ಜನರಿರುವ ಶಾಂಘೈ ನಗರಕ್ಕೆ ಲಾಕ್ಡೌನ್ ವಿಧಿಸಿ ಚೀನಾ ಸರ್ಕಾರ ಆದೇಶ ಹೊರಡಿಸಿದೆ.

ಶಾಂಘೈ ನಗರದಲ್ಲಿ ಭಾನುವಾರ ಒಂದೇ ದಿನ 3,450 ಮಂದಿಯಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಚೀನಾದ ಒಟ್ಟು ಪ್ರಕರಣಗಳ ಶೇ.70 ರಷ್ಟಿದೆ. ಅಲ್ಲದೆ 50 ಮಂದಿಯಲ್ಲಿ ಲಕ್ಷಣ ಸಹಿತ ಪ್ರಕರಣಗಳು ವರದಿಯಾಗಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಶಾಂಘೈನ ಪುಡಾಂಗ್ ಜಿಲ್ಲೆ ಸೇರಿದಂತೆ ಹತ್ತಿರವಿರುವ ನಗರಗಳಲ್ಲೂ ಸೋಮವಾರದಿಂದ ಲಾಕ್ಡೌನ್ ಆರಂಭಿಸಿದ್ದು ಮುಂದಿನ ಶುಕ್ರವಾರದ ವರೆಗೆ ಮುಂದುವರಿಯಲಿದೆ ಎಂದು ಚೀನಾ ಸರ್ಕಾರ ಹೇಳಿದೆ. 

ಈ ಬೆನ್ನಲ್ಲೇ ಹುವಾಂಗ್ಪು ನದಿಯ ಪಶ್ಚಿಮಕ್ಕೆ ಇರುವ ಡೌನ್ಟೌನ್ ಪ್ರದೇಶವೂ ಮುಂದಿನ ಶುಕ್ರವಾರದಿಂದ ತನ್ನದೇ ನಿಯಮಗಳಿಂದ 5 ದಿನಗಳ ಕಾಲ ಲಾಕ್ಡೌನ್ ವಿಧಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ