ಕಾಂಗ್ರೆಸ್ ನವರಿಗೆ ಗಾಂಧಿ ಕುಟುಂಬದ ಹೆಸರು ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ: ಬಿಜೆಪಿ ಟೀಕೆ
ವಿಶ್ವೇಶ್ವರಯ್ಯನವರ ಪ್ರತಿಮೆ ಉದ್ಘಾಟಿಸಲು ಬಂದ ಸಚಿವ ಶಂಕರ್ ತಮ್ಮ ಪಕ್ಕದಲ್ಲಿದ್ದವರ ಬಳಿ ಕೇಳಿ ಅವರ ಹೆಸರು ತಿಳಿದುಕೊಂಡಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಬಿಜೆಪಿ ಲೇವಡಿ ಮಾಡಿದೆ.
‘ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ವಿಶ್ವೇಶ್ವರಯ್ಯನವರ ಹೆಸರು ಹೇಳಲು ತಡವರಿಸಿದರು ಮತ್ತು ಅವರದ್ದೇ ಪಕ್ಷದ ಶಾಸಕರೊಬ್ಬರಿಗೆ ವಿಶ್ವೇಶ್ವರಯ್ಯ ಎಂದರೆ ಯಾರೆಂದೇ ಗೊತ್ತಿಲ್ಲ. ಕಾಂಗ್ರೆಸ್ ನವರ ಸಮಸ್ಯೆಯೇ ಇದು. ಅವರಿಗೆ ಗಾಂಧಿ ಕುಟುಂಬದ ಹೆಸರು ಬಿಟ್ಟರೆ ಬೇರೆ ಯಾರನ್ನೂ ಗೊತ್ತಿರುವುದಿಲ್ಲ’ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದೆ.