ಬಿಎಂಟಿಸಿ ಟಿಕೆಟ್ ದರ ಏರಿಕೆ!

ಶುಕ್ರವಾರ, 6 ಜನವರಿ 2023 (07:47 IST)
ಬೆಂಗಳೂರು : ಕೊರೊನಾ ಕಾರಣಕ್ಕೆ ಬಿಎಂಟಿಸಿಯ ವೋಲ್ವೋ ಬಸ್ಗಳ ದರವನ್ನು ಶೇ.34 ರಷ್ಟು ಕಡಿಮೆ ಮಾಡಿದ್ದ ಬಿಎಂಟಿಸಿ ಮತ್ತೆ ಹಳೆಯ ದರವನ್ನು ಜಾರಿಗೆ ತಂದಿದೆ.

ಸಾರ್ವಜನಿಕರ ಹಿತಾಸಕ್ತಿಯಿಂದ ಶೇ.34 ರಷ್ಟು ದರವನ್ನ ಕಡಿಮೆ ಮಾಡಿ ಪ್ರಯಾಣಿಕರನ್ನ ವೋಲ್ವೋ ಬಸ್ ಗಳ ಕಡೆ ಸೆಳೆಯುವ ಕೆಲಸ ಮಾಡಿತ್ತು.  ಇದೀಗ ಇಂಧನ ದರ ಏರಿಕೆಯ ಕಾರಣ ನೀಡಿ ಬಿಎಂಟಿಸಿ ಮತ್ತೆ ಡಿಸೆಂಬರ್ 2021ರ ಹಿಂದಿನ ದರವನ್ನ ಜಾರಿಗೆ ತಂದಿದೆ. 

ದರದ ಪಟ್ಟಿ

•             ಸಾಮಾನ್ಯ ದರ – 20ರೂ. ನಿಂದ 25 ರೂ. (23.81 ರೂ. ಕ್ಕೆ ಏರಿಕೆಯಾಗಿದೆ.
•             ಮಾಸಿಕ ಪಾಸ್ ದರ 1,500ರೂ. (1,428ರೂ. ರಿಂದ 1,800ರೂ. (1,714.29ರೂ. ಕ್ಕೆ ಏರಿಕೆಯಾಗಿದೆ
•             ದಿನದ ಪಾಸ್ ದರ 100 ರೂ. (95ರೂ. ರಿಂದ 120ರೂ. (114.29ರೂ. ಕ್ಕೆ ಏರಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ