ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ರು. ಆದ್ರೆ, ಅಗತ್ಯವಿರುವಷ್ಟು ಅಕ್ಕಿ ಸಿಕ್ಕಿಲ್ಲ. ಅದಕ್ಕಾಗಿ ರಾಜ್ಯ ನೀಡುವ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ.
ಇಂದಿನಿಂದ ಅನ್ನಭಾಗ್ಯ ಯೋಜನೆಯೂ ಕೂಡ ಜಾರಿಯಾಗಬೇಕಿದೆ. ಬಿಪಿಎಲ್ ಕಾರ್ಡ್ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಕೆಜಿಗೆ 34 ರೂಪಾಯಿಯಂತೆ ತಲಾ 170ಹಣ ಪಾವತಿಸಬೇಕಾಗಿದೆ.
ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರು 340 ರೂಪಾಯಿ ಸಿಗಲಿದೆ. ಒಂದು ವೇಳೆ ಕುಟುಂಬದಲ್ಲಿ ಐವರು ಇದ್ದರೇ ಮಾಸಿಕ 850 ರೂಪಾಯಿ ನೀಡಲಾಗುತ್ತದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ. ಆದ್ರೆ, ಈ ಹಣವನ್ನ ಯಾವಾಗ ಅಕೌಂಟ್ಗೆ ಹಾಕುತ್ತಾರೆ? ಒಂದೇ ಬಾರಿಗೆ ಹಾಕುತ್ತಾರಾ? ಇಲ್ಲ ಹಂತ ಹಂತವಾಗಿ ನೀಡುಲಾಗುತ್ತಾ ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ.