ಡ್ರಿಂಕ್ಸ್ ನಂತರ ಕಾಣಿಸಿಕೊಳ್ಳುವ ತಲೆಭಾರ ಸಮಸ್ಯೆಗೆ ಹೊಸ ಔಷಧಿ ಕಂಡುಹಿಡಿದ ಸಿ.ಎಫ್.ಟಿ.ಆರ್.ಐ

ಗುರುವಾರ, 1 ನವೆಂಬರ್ 2018 (07:31 IST)
ಮೈಸೂರು : ಮದ್ಯಪಾನ ಮಾಡಿದ ನಂತರ ಉಂಟಾಗುವ ತಲೆಭಾರವನ್ನು ಕಡಿಮೆ ಮಾಡಲು ಮೈಸೂರು ನಗರದ ಸಿ.ಎಫ್.ಟಿ.ಆರ್.ಐ ಹೊಸ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ.


ಕೆಲವರು ರಾತ್ರಿ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ನಿದ್ದೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಎದ್ದಾಗ ಅವರಿಗೆ ತುಂಬಾ ತಲೆಭಾರವೆನಿಸುತ್ತದೆ. ಇದಕ್ಕೆ ಪರಿಹಾರವನ್ನು ಇದೀಗ ಸಿ.ಎಫ್.ಟಿ.ಆರ್.ಐ ಕಂಡುಹಿಡಿದಿದೆ.


ಹೌದು. ಹೊಸ ಹೊಸ ಆವಿಷ್ಕಾರ ಮಾಡುವುದರ ಮೂಲಕ ಹೆಸರುವಾಸಿಯಾದ ಸಿ.ಎಫ್.ಟಿ.ಆರ್.ಐ ಇದೀಗ ‘ಎ- ಹ್ಯಾಂಗೊ’ ಎಂಬ ಹೆಸರಿನ ಔಷಧಿಯನ್ನು ಸಂಶೋಧನೆ ಮಾಡಿದೆ. ಇದು ಸೂಕ್ಷ್ಮ ಜೀವಿಗಳಿಂದ ಪಡೆದ ಒಂದು ವಸ್ತುವಾಗಿದ್ದು, ಇದನ್ನ ಗುಳಿಗೆ ರೂಪದಲ್ಲಾಗಲಿ ಅಥವಾ ಪುಡಿ ರೂಪದಲ್ಲಾಗಲಿ ಸೇವಿಸಬಹುದು. ಜೊತೆಗೆ ಕುರ್ ಕುರೆ ಅಂತಹ ವಸ್ತುಗಳ ಮೇಲೆ ಈ ಪುಡಿಯನ್ನ ಹಾಕಿ ಕೂಡ ಸೇವನೆ ಮಾಡಬಹುದು. ಇದರಿಂದ  ತಕ್ಷಣ ತಲೆಭಾರ ಪರಿಹಾರ ಆಗುತ್ತದೆ ಎಂದು ಇದನ್ನು ಕಂಡುಹಿಡಿದ  ವಿಜ್ಞಾನಿ ಅವಿನಾಶ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ