ಮತ್ತೆ ಕೊರೊನಾ ಆರ್ಭಟಕ್ಕೆ ನಲುಗಿದ ಚೀನಾ !
ಲಕ್ಷಾಂತರ ಮಂದಿ ಸೋಂಕಿನಿಂದ ನಲುಗ್ತಿದ್ದಾರೆ. ನಿನ್ನೆ ಬೀಜಿಂಗ್ನಲ್ಲಿ ಕೋವಿಡ್ಗೆ ಇಬ್ಬರು ಬಲಿ ಆಗಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಒಂದು ವಾರದ ಅಂತರದಲ್ಲಿ ಬೀಜಿಂಗ್ನಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ 2,700ಕ್ಕಿಂತಲೂ ಹೆಚ್ಚಾಗಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಬೀಜಿಂಗ್ನ ಸ್ಮಶಾನಗಳೆಲ್ಲ ಕೋವಿಡ್ ಶವಗಳಿಂದ ತುಂಬಿಹೋಗಿವೆ. ಪ್ರತಿದಿನ ಏನಿಲ್ಲ ಅಂದ್ರೂ ಒಂದೊಂದು ಸ್ಮಶಾನಕ್ಕೆ ಕನಿಷ್ಠ 200 ಶವ ಬರ್ತಿವೆ. ಇದು ಆರಂಭ ಮಾತ್ರ. ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಆವರಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ.