ಬೀಜಿಂಗ್ : ಮೀನುಗಾರಿಕೆಗೆ ತೆರಳಿದ್ದ ಚೀನಾದ ದೋಣಿಯೊಂದು ಹಿಂದೂ ಮಹಾಸಾಗರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 39 ಜನರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದೋಣಿಯಲ್ಲಿ ಚೀನಾದ 17 ಪ್ರಜೆಗಳು, ಇಂಡೋನೇಷ್ಯಾದ 17 ಜನ ಹಾಗೂ ಫಿಲಿಪೈನ್ಸ್ನ ಐವರು ಇದ್ದರು ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ ತಿಳಿಸಿದೆ.
ಇದೀಗ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಪ್ರಧಾನಿ ಲಿ ಕಿಯಾಂಗ್ ವಿದೇಶಗಳಲ್ಲಿರುವ ಚೀನಾದ ರಾಜತಾಂತ್ರಿಕರಿಗೆ ಹಾಗೂ ಕೃಷಿ ಮತ್ತು ಸಾರಿಗೆ ಸಚಿವಾಲಯಗಳಿಗೆ ಬದುಕುಳಿದವರನ್ನು ಹುಡುಕಲು ಹಾಗೂ ರಕ್ಷಿಸಲು ಆದೇಶಿಸಿದ್ದಾರೆ.