ನಾಳೆಯಿಂದ ತರಗತಿ ಆರಂಭ : ನಾಗೇಶ್

ಭಾನುವಾರ, 13 ಫೆಬ್ರವರಿ 2022 (15:10 IST)
ಹಾಸನ : ನಾಳೆಯಿಂದ ಒಂಬತ್ತು ಮತ್ತು ಹತ್ತನೇ ತರಗತಿ ಆರಂಭವಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿಸಿ.ನಾಗೇಶ್ ತಿಳಿಸಿದ್ದಾರೆ.

ಹಿಜಬ್ ಮತ್ತು ಕೇಸರಿ ಶಾಲಿನ ವಿವಾದ ಜೋರಾಗುತ್ತಲೇ ಸರ್ಕಾರ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಿತ್ತು. ಇದೀಗ ನಾಳೆಯಿಂದ ಒಂಬತ್ತು ಮತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು ಸೋಮವಾರ ನಡೆಯುವ ಸಿಎಂ ಸಭೆಯ ನಂತರ ಪಿಯುಸಿ ಹಾಗೂ ಪದವಿ ತರಗತಿಗಳನ್ನು ತೆರೆಯುವ ಬಗ್ಗೆ ಯೋಚನೆ ಮಾಡಿ ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ಇದೇ ವೇಳೆ ಹಿಜಬ್ ಯೂನಿಫಾರ್ಮ್ ಅಂಗ ಅಲ್ಲ. ಯಾವ ಕಾರಣಕ್ಕೆ ಆ ಹೆಣ್ಣುಮಕ್ಕಳು ಆ ರೀತಿ ವರ್ತನೆ ಮಾಡಿದರು ಅರ್ಥ ಆಗುತ್ತಿಲ್ಲ. ಈ ಹಿಜಬ್ ವಿವಾದದ ಹಿಂದೆ ಕೆಲ ಮುಸ್ಲಿಂ ಸಂಘಟನೆಗಳ ಕೈವಾಡ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಎಲ್ಲ ಹೊರಬರಲಿದೆ ಎಂದಿದ್ದಾರೆ. 

ಒಟ್ಟಾರೆ ವಿದ್ಯಾ ದೇಗುಲದಲ್ಲಿ ಹಿಜಬ್ ಮತ್ತು ಕೇಸರಿ ಶಾಲಿನ ಗಲಾಟೆ ಆರಂಭವಾಗಿ ಶಿಕ್ಷಣ ವ್ಯವಸ್ಥೆಗೆ ಸಮಸ್ಯೆಯಾಗತೊಡಗಿತ್ತು. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿಗೆ ರಜೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಒಂಬತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು, ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿ ಸಹಕರಿಸುತ್ತಾರೆ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ