ಲೋಕಸಭೆ ಚುನಾವಣೆ ಮುಗಿವವರೆಗೆ ಯಾರೂ ನನ್ನ ಟಚ್ ಮಾಡಕ್ಕಾಗಲ್ಲ: ಸಿಎಂ ಕುಮಾರಸ್ವಾಮಿ
ಶನಿವಾರ, 16 ಜೂನ್ 2018 (09:18 IST)
ಬೆಂಗಳೂರು: ಸಿಎಂ ಕುಮಾರಸ್ವಾಮಿ ಐದು ವರ್ಷವೂ ಮುಖ್ಯಮಂತ್ರಿಯಾಗಿಯೇ ಮುಂದುವರಿಯುತ್ತಾರಾ? ಹೀಗೊಂದು ಪ್ರಶ್ನೆಗೆ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಎಚ್ ಡಿಕೆ ಉತ್ತರಿಸಿದ್ದಾರೆ.
2019 ರ ಲೋಕಸಭೆ ಚುನಾವಣೆ ಮುಗಿವವರೆಗೂ ನನ್ನನ್ನು ಯಾರೂ ಟಚ್ ಮಾಡಕ್ಕಾಗಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಆ ಮೂಲಕ ಮುಂದಿನ ಒಂದು ವರ್ಷದ ಅವಧಿಗೆ ತಾವೇ ಸಿಎಂ ಎಂದು ಸ್ಪಷ್ಟಪಡಿಸಿದ್ದಾರೆ.
‘ಈ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನನಗೆ ಗೊತ್ತು, ಮುಂದಿನ ಒಂದು ವರ್ಷ ಯಾರೂ ನನ್ನನ್ನು ಮುಟ್ಟಕ್ಕಾಗಲ್ಲ. ಅಲ್ಲಿಯವರೆಗೆ ಯಾರೂ ನಂಗೆ ಏನೂ ಮಾಡಕ್ಕಾಗಲ್ಲ. ಹಾಗಾಗಿ ನಾನು ಇರುವವರೆಗೆ ಉತ್ತಮ ಕೆಲಸ ಮಾಡುವುದರತ್ತ ಮಾತ್ರ ನನ್ನ ಗಮನ. ಬೇರೆಯವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದು ಸಿಎಂ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.