ಮತಾಂತರ ತಡೆ ಮಸೂದೆ ಮಂಡನೆ: ಪ್ರಮುಖ ಅಂಶಗಳೇನು?

ಮಂಗಳವಾರ, 21 ಡಿಸೆಂಬರ್ 2021 (06:34 IST)
ಬೆಳಗಾವಿ : ನಾಳೆ ಮತಾಂತರ ತಡೆ ಮಸೂದೆ ಮಂಡನೆ ಆಗಲಿದೆ. ಇವತ್ತು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡನೆಗೆ ಒಪ್ಪಿಗೆ ಸಿಕ್ಕಿದ್ದು, ಕರಡು ಮಸೂದೆಯಲ್ಲಿ ಕೆಲ ಬದಲಾವಣೆ ಮತ್ತು ಬಿಗಿ ಕ್ರಮದೊಂದಿಗೆ ಮಂಡನೆಗೆ ಸಚಿವ ಸಂಪುಟ ತೀರ್ಮಾನಿಸಿದೆ.

ನಾಳೆ ವಿಧಾನಸಭೆ ಕಲಾಪದಲ್ಲಿ ಮತಾಂತರ ನಿಷೇಧ ಕಾನೂನು ಮಂಡನೆ ಆಗಲಿದೆ. ಆದರೆ ಕಾಂಗ್ರೆಸ್ ಪಕ್ಷ ಮತಾಂತರ ತಡೆ ಕಾನೂನು ಜಾರಿಗೆ ತರಲು ಬಿಡಲ್ಲ ಎಂದು ಪಟ್ಟುಹಿಡಿದಿದೆ. ವಿರೋಧದ ಮಧ್ಯೆ ಸರ್ಕಾರ ಮತಾಂತರ ಮಸೂದೆ ಮಂಡನೆಗೆ ಮುಂದಾಗಿದೆ.

ಮತಾಂತರವಾದವರ ಮೂಲ ಹುಡುಕಿದರೆ ಅವರೆಲ್ಲ ಹಿಂದುಗಳೇ. ಕೆಲವು ಕಡೆ ಗೌಪ್ಯವಾಗಿ ಮತಾಂತರ ನಡೆಯುತ್ತಿದೆ. ಬಲವಂತದ ಮತಾಂತರವನ್ನು ಸರ್ಕಾರ ಸಹಿಸಲ್ಲ. ಕಾನೂನು ಮುಖಾಂತರ ಆಸೆ ಆಮಿಷ ಒತ್ತಡ ಮತಾಂತರವನ್ನು ತಡೆಯುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ