ನೂರರ ಗಡಿ ದಾಟಿದ ಕೊರೊನಾ!

ಗುರುವಾರ, 28 ಏಪ್ರಿಲ್ 2022 (07:05 IST)
ಬೆಂಗಳೂರು : ಕೊರೊನಾ 4ನೇ ಅಲೆ ಭೀತಿಯ ಬೆನ್ನಲ್ಲೇ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ.

ಇಂದು ಒಟ್ಟು 126 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಿನ್ನೆಗಿಂತ 41 ಪ್ರಕರಣಗಳು ಹೆಚ್ಚಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಇಂದು ಯಾವುದೇ ಮರಣ ಪ್ರಕರಣಗಳು ದಾಖಲಾಗಿಲ್ಲ.

ಬೆಂಗಳೂರು ನಗರದಲ್ಲಿ ಇಂದು 114 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ರಾಜ್ಯದ ಪಾಸಿಟಿವಿಟಿ ರೇಟ್ 1.16% ಮತ್ತು ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,713 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,057 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇಂದು 99 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 

ಈವರೆಗೆ ರಾಜ್ಯದಲ್ಲಿ ಒಟ್ಟು 39,47,209 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,05,397 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 93,531 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 10,801 ಸ್ಯಾಂಪಲ್ (ಆರ್ಟಿ ಪಿಸಿಆರ್ 8,348 + 2453 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ