ಕೊರೊನಾ, ಡೆಂಘಿ, ಮಲೇರಿಯಾಗೆ ಜನ ತತ್ತರ!

ಮಂಗಳವಾರ, 9 ಆಗಸ್ಟ್ 2022 (06:46 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಒಂದು ವಾರದಿಂದ ಬಿಟ್ಟು ಬಿಡದೇ ಜಡಿಮಳೆ ಅಬ್ಬರಿಸುತ್ತಿದ್ದಾನೆ.

ಭಾರೀ ಮಳೆಯಿಂದ ಬಾನಿಂದ ಸೂರ್ಯ ಮರೆಯಾಗಿದ್ದಾನೆ. ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ಈಗ ಸಾಂಕ್ರಾಮಿಕ ಕಾಯಿಲೆ ಹಬ್ ಆಗಿ ಮಾರ್ಪಾಡಾಗಿದೆ. ಸಿಲಿಕಾನ್ ಸಿಟಿ ಪೋಷಕರೇ ಹುಷಾರ್ ಪೋಷಕರೇ ನಿಚ್ಚ ಮಕ್ಕಳನ್ನು ಆದಷ್ಟು ಬೆಚ್ಚಗಿಟ್ಟುಕೊಂಡು ಆರೋಗ್ಯ ಕಾಪಾಡಿ.

ಕಳೆದೊಂದು ವಾರದಿಂದ ಆಶ್ಲೇಷ ಜಡಿ ಮಳೆಯ ಅಬ್ಬರ ಬೆಂಗಳೂರನ್ನು ನಡುಗಿಸಿದೆ. ಸೂರ್ಯ ದರ್ಶನ ನೀಡ್ತಲೇ ಇಲ್ಲ. ನಿತ್ಯವೂ ಮುಸಲಧಾರೆಯದ್ದೇ ಕಾರುಬಾರು. ಇದರ ಎಫೆಕ್ಟ್ ನಿಂದ ಬೆಂಗಳೂರಿನ ಆಸ್ಪತ್ರೆಗಳಂತೂ ಹೌಸ್ ಫುಲ್ ಆಗಿದೆ.

ಜ್ವರ, ಶೀತ, ಸೇರಿದಂತೆ ಹವಮಾನ ವೈಪರೀತ್ಯದಿಂದ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗಿದ್ದು, ಕೆ.ಸಿ. ಜನರಲ್, ಬೌರಿಂಗ್ ಆಸ್ಪತ್ರೆಯ ಒಪಿಡಿಗಳು ತುಂಬಿ ತುಳುಕುತ್ತಿದೆ.

ಕೊರೊನಾ ಕೇಸ್ ಒಂದ್ಕಡೆ ಹೆಚ್ಚಳ ಆಗ್ತಿದ್ದು, ಕೇಂದ್ರ್ರವೂ ಅಲರ್ಟ್ ಮೆಸೇಜ್ ಕೊಟ್ಟಿದೆ. ಜೊತೆಗೆ ಡೆಂಘಿ, ಮಲೇರಿಯಾ, ಇಲಿ ಜ್ವರದ ಕಾಟವೂ ರಾಜ್ಯದಲ್ಲಿ ಕಾಡುತ್ತಿದೆ ಅಂತಾ ಸ್ವತಃ ಆರೋಗ್ಯ ಸಚಿವರೇ ಹೇಳಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅಂತ ಎಚ್ಚರಿಕೆ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ