ಇಂದಿನಿಂದ ಮನೆ ಮನೆಗೆ ಕೋವಿಡ್ ಲಸಿಕೆ ಅಭಿಯಾನ
ಭಾರತದಲ್ಲಿ ಇಲ್ಲಿಯವರೆಗೂ 100 ಕೋಟಿಗೂ ಅಧಿಕ ಕೊರೋನಾ ವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಗಿದೆ.
ಮೊದಲು ಕೋವಿಡ್ ವ್ಯಾಕ್ಸಿನ್ ಬಂದಾಗ ಲಸಿಕೆ ಪಡೆಯಲು ಜನರು ಹೆದರುತ್ತಿದ್ದರು. ಎಲ್ಲಿ ಏನು ಆಗಿಬಿಡುತ್ತೋ ಅನ್ನುವ ಆತಂಕ ಇತ್ತು. ದಿನಗಳೆದಂತೆ ಈ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿತ್ತು. ಇತ್ತೀಚೆಗೆ 100 ಕೋಟಿ ವ್ಯಾಕ್ಸಿನ್ ಡೋಸ್ ನೀಡುವುದನ್ನ ಪೂರ್ಣ ಗೊಳಿಸಿದರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ಮೋದಿ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗುವ ಭರವಸೆ ನೀಡಿದ್ದರು. ಅದರಂತೆ ಎಲ್ಲವೂ ನಡೆಯುತ್ತಿದೆ. ಆದರೆ ಇನ್ನೂ ಕೆಲವೆಡೆ ವ್ಯಾಕ್ಸಿನ್ ಹಾಕಿಸಲು ಜನ ಹೆದರುತ್ತಿದ್ದಾರೆ. ಸುಳ್ಳು ವದಂತಿಗಳನ್ನು ನಂಬಿ ವ್ಯಾಕ್ಸಿನ್ ಹಾಕಿಸಲು ಹಿಂದೇಟು ಹಾಕುತ್ತಿದ್ದರು. ವ್ಯಾಕ್ಸಿನ್ ಹಾಕಿಸಲು ಯಾರದರೂ ಹೇಳಿದರೇ ಓಡಿ ಹೋಗುತ್ತಿದ್ದಾರೆ. ಇಂಥವರಿಗಾಗಿಯೇ ಇಂದಿನಿಂದ ಒಂದು ತಿಂಗಳುಗಳ ಕಾಲ ಅವಧಿ ನಡೆಯುವ ಮನೆ-ಮನೆಗೆ ಲಸಿಕೆ ಅಭಿಯಾನ ಆರಂಭವಾಗಲಿದೆ.