ಸೈಬರ್ ಹ್ಯಾಕ್ ಮಾಡಿದ ಯೂರೋಪ್!

ಸೋಮವಾರ, 7 ಮಾರ್ಚ್ 2022 (14:38 IST)
ಪ್ಯಾರಿಸ್ : ಉಕ್ರೇನ್-ರಷ್ಯಾದ ಯುದ್ಧ ಪ್ರಾರಂಭವಾದ ಬಳಿಕ ಶುಕ್ರವಾರ ಸೈಬರ್ ಅಟ್ಯಾಕ್ ಆಗಿರುವ ಬಗ್ಗೆ ವದಂತಿಗಳು ಹಬ್ಬಿವೆ.
 
ಈ ಕಾರಣದಿಂದ ಯೂರೋಪ್ನಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಬಳಕೆದಾರರು ಇಂಟರ್ನೆಟ್ ಇಲ್ಲದೇ ದಿನದೂಡುತ್ತಿದ್ದಾರೆ.

ಫ್ರಾನ್ಸ್ ಅಂಗಸಂಸ್ಥೆ ನಾರ್ಡ್ನೆಟ್ ಒದಗಿಸುತ್ತಿದ್ದ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಸುಮಾರು 9 ಸಾವಿರ ಚಂದಾದಾರರು ಬಳಸುತ್ತಿದ್ದು, ಈ ಸೇವೆಯನ್ನು ಫೆಬ್ರವರಿ 24ರಂದು ಸ್ಥಗಿತಗೊಳಿಸಲಾಗಿದೆ.

ಇದೀಗ ಅಷ್ಟೂ ಜನರು ಇಂಟರ್ನೆಟ್ ಸೇವೆ ಇಲ್ಲದೇ ಇರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇತರ ಇಂಟರ್ನೆಟ್ ಮೂಲಗಳನ್ನು ಹುಡುಕಬೇಕಾದ ಸಂದಿಗ್ಧತೆ ಎದುರಾಗಿದೆ. 

ಯೂರೋಪ್, ಜರ್ಮನಿ, ಫ್ರಾನ್ಸ್, ಹಂಗೇರಿ, ಗ್ರೀಸ್, ಇಟಲಿ ಹಾಗೂ ಪೋಲೆಂಡ್ನಲ್ಲಿ ಬಿಗ್ಬ್ಲೂನ 40,000 ಚಂದಾದಾರರಿದ್ದಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನರಿಗೆ ಇಂಟರ್ನೆಟ್ ಸ್ಥಗಿತದ ಪರಿಣಾಮ ಬೀರಿದೆ. ಈ ಮಾಹಿತಿಯನ್ನು ಬಿಗ್ಬ್ಲೂ ಉಪಗ್ರಹ ಇಂಟರ್ನೆಟ್ ಸೇವೆಯ ಮೂಲ ಕಂಪನಿ ಯುಟೆಲ್ಸಾಟ್ ಶುಕ್ರವಾರ ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ