ಬಂಡಾಯದ ಬಿಸಿ ನಡುವೆಯೇ ಡಿಕೆಶಿ-ಪರಮೇಶ್ವರ್ ದಿಡೀರ್ ಭೇಟಿ
ಸುಖಾಸುಮ್ಮನೇ ಜಾರಕಿಹೊಳಿ ಬಂಡಾಯ ವಿಚಾರದಲ್ಲಿ ತಮ್ಮ ಹೆಸರು ಎಳೆದುತರಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಡಿಸಿಎಂ ಪರಮೇಶ್ವರ್ ಸಚಿವ ಡಿಕೆಶಿ ಅವರ ಸದಾಶಿವ ನಗರದ ನಿವಾಸಕ್ಕೆ ಆಗಮಿಸಿ ದಿಡೀರ್ ಮಾತುಕತೆ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ಪರಮೇಶ್ವರ್ ಜಾರಕಿಹೊಳಿ ಸಹೋದರರ ವಿಚಾರದಲ್ಲಿ ಡಿಕೆ ಶಿವಕುಮಾರ್ ಪಾತ್ರವಿಲ್ಲ. ಅವರು ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ತಲೆ ಹಾಕಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಇದರ ನಡುವೆಯೇ ಇಂದು ಸ್ವತಃ ಡಿಕೆಶಿ ನಿವಾಸಕ್ಕೆ ಪರಮೇಶ್ವರ್ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.