ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿದ ವಿಷಯ ಯಾವುದು ಗೊತ್ತಾ?
ಮಕ್ಕಳಾಟಿಕೆಯ ವಸ್ತುವಿನಿಂದ ಹಿಡಿದು ಬಾಹ್ಯಾಕಾಶ ವಿಜ್ಞಾನದವರೆಗೂ ಯಾವುದೇ ವಿಷಯದ ಮಾಹಿತಿ ಬೇಕಿದ್ದರೂ ಗೂಗಲ್ ನಮಗೆ ಬೆನ್ನೆಲುಬಾಗಿ ನಿಲ್ಲುತ್ತದೆ. ಮೈಕ್ರೋ ಸೆಕೆಂಡ್ಗಳಲ್ಲಿ ನಾವು ಸರ್ಚ್ ಮಾಡಿದ ವಿಷಯದ ಬಗ್ಗೆ ಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯನ್ನು ನೀಡುತ್ತದೆ.
ಅತಿ ಹೆಚ್ಚು ಅಂತರ್ಜಾಲ ಬಳಕೆದಾರರು ಇರುವ ಭಾರದಲ್ಲಿ 2021ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಪದಗಳ ಪಟ್ಟಿ ಈಗ ಬಿಡುಗಡೆಯಾಗಿದೆ. ಗೂಗಲ್ ಬುಧವಾರ ತನ್ನ 2021 ವರ್ಷದ ಸರ್ಚ್ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತದ ಈ ವರ್ಷದಲ್ಲಿ ಬಳಕೆದಾರರು ಹುಡುಕಾಡಿದ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದೆ.
ಭಾರತದಲ್ಲಿ ಮಾಡಲಾಗಿರುವ ಸರ್ಚ್ಗಳಲ್ಲಿ ಕ್ರಿಕೆಟ್ ವಿಷಯದ ಸರ್ಚ್ಗಳು ಅಗ್ರಸ್ಥಾನದಲ್ಲಿದ್ದೂ 'ಇಂಡಿಯನ್ ಪ್ರೀಮಿಯರ್ ಲೀಗ್ ' ಮತ್ತು 'ಐಸಿಸಿ ಟಿ 20 ವಿಶ್ವಕಪ್' ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ. 'ಕೋವಿನ್' ಮತ್ತು 'ಕೋವಿಡ್ ಲಸಿಕೆ' ಗಾಗಿ ಕೂಡ ಸಾಕಷ್ಟು ಸರ್ಚ್ಗಳಾಗಿದ್ದು ದೇಶದಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ ಎಂದು ಸರ್ಚ್ ದೈತ್ಯ ಹೇಳಿದೆ. ಬ್ಯಾಟಲ್ ರಾಯಲ್ ಗೇಮ್ ಗರೆನಾ ಫ್ರೀ ಫೈರ್ ಗೇಮಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ವಿಷಯವಾಗಿದ್ದು ಅದು ದೇಶದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಗೆ ಸೇರಿದೆ.