ಬೆಂಗಳೂರು : ರೋಹಿತ್ ಚಕ್ರತೀರ್ಥ ಸಮಿತಿ ಮಾಡಿಕೊಟ್ಟಿದ್ದ ಪಠ್ಯ ಪರಿಷ್ಕರಣೆಯನ್ನು ಖಂಡಿಸಿ ನಾಡಿನ ಹಲವು ಪ್ರಗತಿಪರ ಚಿಂತಕರು ಪಠ್ಯವಾಪ್ಸಿ ಚಳುವಳಿ ನಡೆಸಿದ್ದರು.
ಸರ್ಕಾರಕ್ಕೆ ಪತ್ರ ಬರೆದು ತಮ್ಮ ಪಠ್ಯ/ಪದ್ಯವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಇದೀಗ ತಡವಾಗಿ ಸ್ಪಂದಿಸಿದೆ.
ಶೈಕ್ಷಣಿಕ ವರ್ಷದಲ್ಲಿ ಅರ್ಧ ಭಾಗ ಮುಗಿದ ಬಳಿಕ ಇದೀಗ 7 ಸಾಹಿತಿಗಳ ಪಠ್ಯಗಳನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ.
10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ ರಾಮಕೃಷ್ಣ ಅವರ ಭಗತ್ ಸಿಂಗ್ ಪಾಠ, ಈರಪ್ಪ ಕಂಬಳಿ ಅವರ ಹೀಗೊಂದು ಟಾಪ್ ಪಯಣ, ಸತೀಶ್ ಕುಲಕರ್ಣಿಯ ಕಟ್ಟುತ್ತೇವೆ ನಾವು ಪದ್ಯ, ಸುಕನ್ಯ ಮಾರುತಿ ಅವರ ಏಣಿ ಪದ್ಯವನ್ನು ಕೈಬಿಡಲಾಗಿದೆ.