ಚಂದ್ರಲೋಕದಲ್ಲಿ ಮೊದಲ ಬಾರಿಗೆ ತಾಪಮಾನ ಪರೀಕ್ಷೆ

ಸೋಮವಾರ, 28 ಆಗಸ್ಟ್ 2023 (07:42 IST)
ಬೆಂಗಳೂರು : ಬಾಹ್ಯಾಕಾಶ ಸಂಶೋಧನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಚಂದ್ರನ ಮಣ್ಣಿನ ತಾಪಮಾನ ಪತ್ತೆ ಹಚ್ಚಲಾಗಿದೆ. ಭಾರತದ ಚಂದ್ರಯಾನ 3 ಯೋಜನೆಯ ಮೂಲಕ ದಕ್ಷಿಣ ಧ್ರುವ ತಲುಪಿರುವ ವಿಕ್ರಮ್ ಲ್ಯಾಂಡರ್ ತನ್ನ ChaSTE ಪೇಲೋಡ್ನ ಸಹಾಯದಿಂದ ಮಣ್ಣಿನ ಅಧ್ಯಯನ ಆರಂಭಿಸಿದೆ.
 
ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿತ್ತು. ಇದಾದ ನಾಲ್ಕು ದಿನಗಳ ಬಳಿಕ ವೈಜ್ಞಾನಿಕ ಪ್ರಯೋಗಗಳ ಮಾಹಿತಿ ಲಭ್ಯವಾಗುತ್ತಿದೆ. ಪೇಲೋಡ್ ಚಂದ್ರನ ಭೂಮಿಯನ್ನು 10 ಸೆಂಟಿ ಮೀಟರ್ ಕೊರೆದು ಪರೀಕ್ಷೆ ನಡೆಸಿದ್ದು, – 10 ಡಿಗ್ರಿಯಿಂದ -60 ಡಿಗ್ರಿ ತಾಪಮಾನ ಇದೆ ಎಂದು ತಿಳಿಸಿದೆ. 

ಚಂದ್ರನ ಮೇಲ್ಮೈಯ ಉಷ್ಣ ವರ್ತನೆಯನ್ನು ಅರ್ಥಮಾಡಿಕೊಳ್ಳಲು ChaSTE ಚಂದ್ರನ ಮೇಲ್ಮೈ ಮೇಲೆ ಥರ್ಮೋಫಿಸಿಕಲ್ ಪ್ರಯೋಗ ನಡೆಸಿದೆ ಎಂದು ಟ್ವೀಟ್ನಲ್ಲಿ ಇಸ್ರೋ ವಿವರಿಸಿದ್ದು, ಗ್ರಾಫ್ ಚಿತ್ರಣವನ್ನು ಹಂಚಿಕೊಂಡಿದೆ. ತನಿಖೆಗೆ 10 ಪ್ರತ್ಯೇಕ ತಾಪಮಾನ ಸಂವೇದಕಗಳನ್ನು ಅಳವಡಿಸಲಾಗಿದೆ ಎಂದು ಟ್ವೀಟ್ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ