ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಜೆಡಿಎಸ್ ಸೇರ್ಪಡೆ

ಗುರುವಾರ, 26 ಏಪ್ರಿಲ್ 2018 (17:21 IST)
ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಇಂದು ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
2008ರಲ್ಲಿ ಜೆಡಿಎಸ್ ನಿಂದಲೆ ಶಾಸಕರಾಗಿದ್ದ ಕಲ್ಪನಾ ಸಿದ್ದರಾಜು 2013ರ ವಿಧಾನಸಭಾ ಚುನಾವಣೆಯಲ್ಲಿ  ಜೆಡಿಎಸ್ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಪಕ್ಷೇತರವಾಗಿ ಸ್ಷರ್ಧಿಸಿ ಪರಾಭವಗೊಂಡಿದ್ರು. ನಂತರ  ಕಾಂಗ್ರೆಸ್ ಸೇರಿದ್ದ ಕಲ್ಪನಾ, ಈ ಬಾರಿ  ಕಾಂಗ್ರೆಸ್ ಪಕ್ಷದ ಪ್ರಬಲ ಟಿಕಟ್ ಆಕಾಂಕ್ಷಿಯಾಗಿದ್ರು. 
 
ಆದ್ರೆ ಟಿಕೆಟ್ ಲಭಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಇಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಕಲ್ಪನಾ ಸಿದ್ದರಾಜು ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ್ರು. ಈ ವೇಳೆ ಮಾತನಾಡಿದ  ಎಚ್ ಡಿಕೆ, ನನ್ನ ಸಹೋದರಿ ಕಲ್ಪನಾ ಮರಳಿ ಗೂಡಿಗೆ ಬಂದಿದ್ದಾಳೆ. ಕಲ್ಪನಾ ಬಂದಿದ್ದು ‌ಪಕ್ಷಕ್ಕೆ ಬಲ ಬಂದಿದ್ದು, ಮದ್ದೂರುನಲ್ಲಿ ಜೆಡಿಎಸ್ ಗೆಲುವು ಸುಲಭವಾಗಲಿದೆ . 
 
ಆಕೆಗೆ ಪಕ್ಷದಲ್ಲಿ ಗೌರವಾನ್ವಿತ ಸ್ಥಾನವನ್ನು ಕೊಟ್ಟು ರಾಜಕೀಯ ಬೆಳವಣಿಗೆಗೆ ಸಹಕಾರ ಮಾಡಲಿದೆ ಎಂದು ಎಂದು ಹೇಳಿದ್ರು. ಇನ್ನು ಪಕ್ಷ ಸೇರ್ಪಡೆ ನಂತ್ರ ಮಾತನಾಡಿದ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಕಾಂಗ್ರೆಸ್ ನನಗೆ ಮೋಸ ಮಾಡಿದೆ. ಕೆಲವು ಕಾಣದ ಕೈಗಳು ನನಗೆ ಟಿಕಟ್ ತಪ್ಪಿಸುವಲ್ಲಿ ಸಫಲರಾಗಿದ್ದಾರೆ ಎಂದು ಪರೋಕ್ಷವಾಗಿ ಚೆಲುವರಾಯಸ್ವಾಮಿ ವಿರುದ್ದ ಹರಿಹಾಯ್ದರು.
 
 ಜೆಡಿಎಸ್ ನಮ್ಮ ತವರು ಪಕ್ಷ ಹಿಂದೆ ನನ್ನ ಪತಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿದ್ರು ನಾನು ಕೂಡ ಜೆಡಿಎಸ್ ನಿಂದಲೆ ಶಾಸಕಿಯಾಗಿದ್ದೆ. ದೇವೆಗೌಡ್ರು ಹಾಗೂ ಕುಮಾರಸ್ವಾಮಿ ಮೇಲೆ ಗೌರವವಿದೆ. ಇನ್ಮುಂದೆ  ಜೆಡಿಎಸ್ ಪಕ್ಷದ ಗೆಲುವುವಿಗಾಗಿ ದುಡಿಯುವೇ ಎಂದು ತಿಳಿಸಿದ್ದಾರೆ.‌‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ