ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

ಗುರುವಾರ, 29 ಜುಲೈ 2021 (20:26 IST)
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವೈದ್ಯಕೀಯ ಪ್ರವೇಶಕ್ಕಾಗಿ ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ಇಡಬ್ಲ್ಯೂಎಸ್ (ಅಖಿಲ ಭಾರತ ಕೋಟಾದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ಅನುಮೋದಿಸಿದೆ. )ಈಗ, ಪದವಿ (ಎಂಬಿಬಿಎಸ್, ಬಿಡಿಎಸ್), ಸ್ನಾತಕೋತ್ತರ ಮತ್ತು ಡಿಪ್ಲೊಮಾ ಮಟ್ಟದ ವೈದ್ಯಕೀಯ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಇತರ ಹಿಂದುಳಿದ ವರ್ಗದ ವರ್ಗಗಳು (ಒಬಿಸಿ) 27%, ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗ (EWS) ನಿಂದ 10% ಮೀಸಲಾತಿಯನ್ನು ಪಡೆಯಬಹುದಾಗಿದೆ.

ಸರ್ಕಾರದ ಈ ನಿರ್ಧಾರ ಪ್ರತಿವರ್ಷ ಎಂಬಿಬಿಎಸ್ಗೆ ಸೇರುವ ಸುಮಾರು 1500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿಯ 2500 ಒಬಿಸಿ ವಿದ್ಯಾರ್ಥಿಗಳಿಗೆ ಮತ್ತು ಎಂಬಿಬಿಎಸ್ನಲ್ಲಿ ಸುಮಾರು 550 ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1000 ಇಡಬ್ಲ್ಯೂಎಸ್ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಅಖಿಲ ಭಾರತ ಕೋಟಾ (ಎಐಕ್ಯೂ) ಅಡಿಯಲ್ಲಿ ಈ ಮೀಸಲಾತಿ ನೀಡಲಾಗುವುದು. ಎಐಕ್ಯು ಅಡಿಯಲ್ಲಿ, ಎಸ್ಸಿಗೆ 15% ಮತ್ತು ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಈಗಾಗಲೇ 7.5% ಮೀಸಲಾತಿ ನೀಡಲಾಗುತ್ತಿದೆ. ಹೊಸ ಕೋಟಾ ಕಾನೂನು ಅಸ್ತಿತ್ವದಲ್ಲಿರುವ ಮಾನದಂಡಗಳಿಗೆ ಹೋಲಿಸಿದರೆ ಹೆಚ್ಚುವರಿಯಾದ ಸವಲತ್ತಾಗುತ್ತದೆ.
ನೀಟ್ (ಯುಜಿ ಮತ್ತು ಪಿಜಿ ಎರಡೂ) ಪರೀಕ್ಷೆಯನ್ನು ಪಾಸ್ ಮಾಡಿದ ವಿದ್ಯಾರ್ಥಿಗಳು ಕೌನ್ಸೆಲಿಂಗ್ಗೆ ಹಾಜರಾಗಬೇಕು. ಈ ಕೌನ್ಸೆಲಿಂಗ್ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತದೆ. 50% ಪಿಜಿ ಮತ್ತು 15% ಎಲ್ಲಾ ಯುಜಿ ಸೀಟುಗಳು ಕೇಂದ್ರ ಕೋಟಾ ಅಥವಾ ಅಖಿಲ ಭಾರತ ಕೋಟಾ ಅಡಿಯಲ್ಲಿ ಬರುತ್ತವೆ. ಆಲ್ ಇಂಡಿಯಾ ಕೋಟ  ವಿಭಾಗದಲ್ಲಿ ಈ ಹೊಸ ಮೀಸಲಾತಿಯನ್ನು ಸೇರಿಸಲಾಗುವುದು.
ಈ ಮೊದಲು ನ್ಯೂಸ್ 18ವರದಿ ಮಾಡಿದಂತೆ, ಪಿಎಂ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಸಭೆ ನಡೆಸಿ ವೈದ್ಯಕೀಯ ಕಾಲೇಜುಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡಬೇಕು ಎನ್ನುವ ಬಹುದಿನಗಳ ಬೇಡಿಕೆ ಕುರಿತು ಚರ್ಚಿಸಿದರು. ಒಬಿಸಿ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ ಇಡಬ್ಲ್ಯೂಎಸ್ ವರ್ಗಕ್ಕೂ ಮೀಸಲಾತಿ ನೀಡಲು ಪಿಎಂ ಪರವಾಗಿದ್ದರು.
ಈ ಕೋಟಾವನ್ನು ಘೋಷಿಸಿದ ನಂತರ, ಪಿಎಂ ಮೋದಿ ಟ್ವಿಟರ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ, "ನಮ್ಮ ಸರ್ಕಾರವು  ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ / ದಂತ ಶಿಕ್ಷಣಕ್ಕಾಗಿ ಅಖಿಲ ಭಾರತ ಕೋಟಾ ಯೋಜನೆಯಲ್ಲಿ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ 10% ಮೀಸಲಾತಿ ಹಾಗೂ ಒಬಿಸಿಗಳಿಗೆ 27% ಮೀಸಲಾತಿಯನ್ನು ನೀಡುವ ಮಹತ್ವದ  ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನಮ್ಮ ಸಾವಿರಾರು ಯುವಕರಿಗೆ ಉತ್ತಮ ಅವಕಾಶಗಳನ್ನು ಪಡೆಯಲು ಇದು ಸಹಕಾರಿಯಾಗಿದೆ ಮತ್ತು ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯದ ಹೊಸ ಮಾದರಿಯನ್ನು ಸೃಷ್ಟಿಸಲು ಅಪಾರ ಸಹಾಯ ಮಾಡುತ್ತದೆ. " ಎಂದು ಹೇಳಿದ್ದಾರೆ.
ಅಖಿಲ ಭಾರತ ಕೋಟಾ (ಎಐಕ್ಯು) ಯೋಜನೆಯನ್ನು 1986 ರಲ್ಲಿ ಮಾನ್ಯ ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಜಾರಿಗೆ ತರಲಾಯಿತು. ದೇಶದ ಯಾವುದೇ ರಾಜ್ಯದ ವಿದ್ಯಾರ್ಥಿಗಳು ಬೇರೆ ರಾಜ್ಯದಲ್ಲಿರುವ ಉತ್ತಮ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಇದು ಮುಕ್ತ ಅರ್ಹತೆ ಆಧಾರಿತ ಅವಕಾಶಗಳನ್ನು ಒದಗಿಸುತ್ತದೆ.
ಕಳೆದ ಆರು ವರ್ಷಗಳಲ್ಲಿ, ದೇಶದ ಎಂಬಿಬಿಎಸ್ ಸೀಟುಗಳು 56% ರಷ್ಟು ಹೆಚ್ಚಾಗಿದೆ.  2014 ರಲ್ಲಿ 54,348 ಸೀಟುಗಳಿಂದ 2020 ರಲ್ಲಿ 84,649 ಸೀಟುಗಳಿಗೆ ಮತ್ತು ಪಿಜಿ ಸೀಟುಗಳ ಸಂಖ್ಯೆ 2014 ರಲ್ಲಿ 30,191 ಸೀಟ್ಗಳಿಂದ 80% ರಷ್ಟು ಹೆಚ್ಚಾಗಿದ್ದು, 2020 ರಲ್ಲಿ 54,275 ಸೀಟ್ಗಳಿಗೆ ಏರಿಕೆಯಾಗಿತ್ತು. ಅದೇ ಅವಧಿಯಲ್ಲಿ, 179 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಮತ್ತು ಈಗ ದೇಶದಲ್ಲಿ 558 ವೈದ್ಯಕೀಯ ಕಾಲೇಜುಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ