ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

ಶನಿವಾರ, 27 ನವೆಂಬರ್ 2021 (12:54 IST)
ಬೆಂಗಳೂರು : ಈ ಬಾರಿ ರಾಜ್ಯ ಸರ್ಕಾರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ವೊಂದನ್ನು ನೀಡಿದೆ.
ಕೊರೊನಾ ಹಿನ್ನೆಲೆ ತರಗತಿಗಳು ತಡವಾಗಿ ಪ್ರಾರಂಭ ಆಗಿದ್ದವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪಠ್ಯವನ್ನು ಪೂರ್ಣಗೊಳಿಸಲು ಅನೇಕ ತೊಂದರೆಗಳು ಉಂಟಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಈ ವರ್ಷ 20% ಪಠ್ಯ ಕಡಿತ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ. ಕಡಿಮೆ ಸಮಯದಲ್ಲಿ 100% ಪಠ್ಯ ಬೋಧನೆ ಮಾಡುವುದು ಕಷ್ಟವಾಗಿತ್ತು. ಹೀಗಾಗಿ ಪಠ್ಯ ಕಡಿತಕ್ಕೆ ಒತ್ತಡ ಕೇಳಿ ಬಂದಿತ್ತು.
ಇದನ್ನೆಲ್ಲವನ್ನು ಗಮನಿಸಿದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 20% ಪಠ್ಯ ಕಡಿತಗೊಳಿಸುವ ಸಾಧ್ಯತೆಯಿದೆ. 80% ಮಾತ್ರ ಪಠ್ಯ ಬೋಧನೆಗೆ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. 
ಪ್ರಾರಂಭಿಕ ಹಂತದಲ್ಲಿ ಎಸ್ಎಸ್ಎಲ್ಸಿ ಪಠ್ಯ ಕಡಿತದ ಬಗ್ಗೆ ಅಷ್ಟೇ ಚಿಂತನೆ ನಡೆಸಿದ್ದು, ಬಳಿಕ ಉಳಿದ ತರಗತಿಗಳ ಪಠ್ಯ ಕಡಿತಗಳ ಬಗ್ಗೆ ಚಿಂತಿಸುವ ಸಾದ್ಯತೆಯಿದೆ ಶಿಕ್ಷಣ ಇಲಾಖೆ ತಿಳಿಸಿದೆ.ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, 20% ಕಡಿತಕ್ಕೆ ಚಿಂತನೆ ಮಾಡಿದ್ದೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮನಸ್ಸಿನಲ್ಲಿ ಇಟ್ಟುಕೊಂಡು ಪಠ್ಯ ಕಡಿತಗೊಳಿಸಲಾಗುತ್ತದೆ.
ಪರೀಕ್ಷೆಯ ಕುರಿತು ಮಾತನಾಡಿ, ಮಾರ್ಚ್- ಏಪ್ರಿಲ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ವರ್ಷ ಪಠ್ಯ ಕಡಿತ ಮಾಡಿದ್ದನ್ನು ಮುಂದಿನ ವರ್ಷ ಶಾಲೆ ಪ್ರಾರಂಭವಾದ ಕೂಡಲೇ ಪಠ್ಯ ಬೋಧನೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ