ಉದ್ದನೆಯ ಕೂದಲಿಗಾಗಿ ಗಿನ್ನಿಸ್ ವರ್ಲ್ಡ್ ದಾಖಲೆ

ಶನಿವಾರ, 3 ಡಿಸೆಂಬರ್ 2022 (10:43 IST)
ನವದೆಹಲಿ : ನಿವೃತ್ತ ಶಿಕ್ಷಕರೊಬ್ಬರು  ಕಿವಿಯಲ್ಲಿ ಉದ್ದನೆಯ ಕೂದಲನ್ನು ಬೆಳೆಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ನಿವೃತ್ತ ಶಿಕ್ಷಕರಾದ ಆಂಟೋನಿ ವಿಕ್ಟರ್ ಎನ್ನುವವರು ಈ ದಾಖಲೆಗೆ ಪಾತ್ರರಾದವರು. ಆಂಟೋನಿ ತನ್ನ ಹೊರಗಿನ ಕಿವಿಗಳ ಮಧ್ಯಭಾಗದಿಂದ ಕೂದಲನ್ನು 18.1 ಸೆ.ಮೀ (7.12 ಇಂಚು) ಅಳತೆಯ ಉದ್ದದಲ್ಲಿ ಬೆಳೆಸಿದ್ದಾರೆ.

ಅವರು 2007ರಿಂದ ಕಿವಿಯಲ್ಲಿ ಕೂದಲನ್ನು ಬೆಳೆಸಲು ಪ್ರಾರಂಭಿಸಿದ್ದು, ಇದೀಗ ವಿಶ್ವದಾಖಲೆಯನ್ನು ಬರೆದಿದ್ದಾರೆ. ಈ ಬಗ್ಗೆ ದಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇನ್ಸ್ಟಾಗ್ರಾಮ್ ಖಾತೆ ಈ ವಿಷಯವನ್ನು ಹಂಚಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ