ಬೆಂಗಳೂರು : ರಾಜ್ಯಕ್ಕೆ ಮುಂಗಾರು ಮಾರುತಗಳ ಪ್ರವೇಶ ಮಾಡಿದೆ. ಮುಂದಿನ 3-4 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದಕ್ಷಿಣ ಒಳನಾಡು, ಕರಾವಳಿಯ ಬಹುತೇಕ ಜಿಲ್ಲೆ, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲೂ ಸಹ ಧಾರಾಕಾರ ಮಳೆ ಮುನ್ಸೂಚನೆ ನೀಡಲಾಗಿದೆ. ಮಳೆ ಜೊತೆಗೆ ಗುಡುಗು, ಸಿಡಿಲು ಮಿಂಚಿನ ಎಚ್ಚರಿಕೆಯನ್ನೂ ನೀಡಿದೆ.
ವಿಜಯಪುರದ ಮುದ್ದೇಬಿಹಾಳ ತಾಲೂಕಿನಲ್ಲಿ ಕಳೆದ ರಾತ್ರಿ ಸುರಿದ ಗಾಳಿ, ಮಳೆ, ಸಿಡಿಲು ಬಡಿದು ಎತ್ತು ಸಾವನ್ನಪ್ಪಿದೆ. ಅಂದಾಜು 80 ಸಾವಿರ ರೂಪಾಯಿ ಮೌಲ್ಯದ ಎತ್ತು ಕಳೆದುಕೊಂಡು ರೈತ ಗದ್ದೆಪ್ಪ ಎಂಬುವರು ಕಂಗಾಲಾಗಿದ್ದಾರೆ.
ಈ ನಡುವೆ ರಾಜ್ಯದ ಹಲವೆಡೆ ರಸಗೊಬ್ಬರ ಅಭಾವ ತಲೆದೂರಿದೆ. ಯೂರಿಯಾ, ಡಿಎಪಿ ಸಿಗ್ತಿಲ್ಲ ಎಂದು ಸಿಟ್ಟಿಗೆದ್ದ ಧಾರವಾಡದ ರೈತರು ಶಾಸಕ ಅರವಿಂದ ಬೆಲ್ಲದ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.