ಬೆಂಗಳೂರು ಪಾರ್ಕ್, ಮಾಲ್ಗಳಲ್ಲಿ ಹೈ ಅಲರ್ಟ್
ಈಗಾಗಲೇ ಪ್ರೇಮಿಗಳ ದಿನಾಚರಣೆ ಮಾಡಬಾರದು. ಇದನ್ನ ತಂದೆ-ತಾಯಂದಿರ ದಿನವನ್ನಾಗಿ ಆಚರಣೆ ಮಾಡಬೇಕು ಅಂತಾ ಕರೆ ಕೊಡಲಾಗಿದೆ. ಅದಕ್ಕೂ ಮೀರಿ ಪ್ರೇಮಿಗಳ ದಿನಾಚರಣೆಗೆ ಅನುಮತಿ ನೀಡಬಾರದು ಅಂತಾ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡಿವೆ.
ಪ್ರತಿ ವರ್ಷದಂತೆ ಈ ವರ್ಷವೂ ಈ ರೀತಿ ದಿನಾಚರಣೆಗೆ ವಿರೋಧ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ನೈತಿಕ ಪೊಲೀಸ್ಗಿರಿ ನಡೆಯೋ ಭಯದಲ್ಲಿ ಇರೋ ಪೊಲೀಸರು ಪಾರ್ಕ್ಗಳಲ್ಲಿ, ಮಾಲ್ಗಳಲ್ಲಿ ಎಚ್ಚರಿಕೆ ವಹಿಸುವಂತೆ ಕಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.