ಬೂಸ್ಟರ್ ಡೋಸ್ ಪಡೆಯಲು ಅಂತರ ಕಡ್ಡಾಯ?

ಸೋಮವಾರ, 27 ಡಿಸೆಂಬರ್ 2021 (06:23 IST)
ನವದೆಹಲಿ : ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದ್ದಂತೆ ದೇಶದಲ್ಲಿ ಫ್ರಂಟ್ಲೈನ್ ವರ್ಕರ್ಸ್ ಮತ್ತು 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ಗೆ ಅರ್ಹರು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
 
ಈ ನಡುವೆ ಬೂಸ್ಟರ್ ಡೋಸ್ ಪಡೆಯಲು 2ನೇ ಡೋಸ್ ಲಸಿಕೆ ಬಳಿಕ 9 ರಿಂದ 12 ತಿಂಗಳ ಅಂತರ ಇರಬೇಕೆಂದು ವರದಿಯಾಗಿದೆ.

2 ಡೋಸ್ ಲಸಿಕೆ ಪಡೆದ ಅರ್ಹ ವ್ಯಕ್ತಿ ಬೂಸ್ಟರ್ ಡೋಸ್ ಪಡೆಯಬೇಕಾದರೆ ಕನಿಷ್ಠ ಪಕ್ಷ 9 ರಿಂದ 12 ತಿಂಗಳು ಆಗಿರಬೇಕೆಂದು ವರದಿಯಾಗಿದ್ದು, ಈ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್ಟಿಎಜಿಐ) ಪರಿಶೀಲಿಸುತ್ತಿದೆ ಎಂದು ಆಪ್ತ ಮೂಲಗಳಿಂದ ವರದಿ ಹೊರಬಿದ್ದಿದೆ.

ಇದೀಗ ಫ್ರಂಟ್ಲೈನ್ ವರ್ಕರ್ಸ್ ಮತ್ತು 60 ವರ್ಷ ಮೇಲ್ಪಟ್ಟವರು ವೈದ್ಯರ ಶಿಫಾರಸಿನ ಮೇರೆಗೆ 2022ರ ಜನವರಿ 10 ರಿಂದ ಬೂಸ್ಟರ್ ಡೋಸ್ಗೆ ಅರ್ಹರು ಪ್ರಧಾನಿ ಮೋದಿ ಶನಿವಾರ ಪ್ರಕಟಿಸಿದ್ದರು. 

ಇದೀಗ ಎನ್ಟಿಎಜಿಐ ಲಸಿಕೆಯ ಅಂತರದ ಬಗ್ಗೆ ಪರಿಶೀಲಿಸಿ ಶೀರ್ಘವೇ ಈ ಬಗ್ಗೆ ಸ್ಪಷ್ಟವಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ