ಜೋಶಿಮಠ ಮುಳುಗುವ ಎಚ್ಚರಿಕೆ ನೀಡಿದ ಇಸ್ರೋ !

ಭಾನುವಾರ, 15 ಜನವರಿ 2023 (12:42 IST)
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೋಶಿಮಠದಲ್ಲಿ ಆಗುತ್ತಿರುವ ಭೂ ಕುಸಿತದ ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಇಡೀ ಜೋಶಿಮಠ ಮುಳುಗುವ ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ಉಪಗ್ರಹ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಇಸ್ರೋ ಬಿಡುಗಡೆಗೊಳಿಸಿರುವ ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ. ಎನ್ಆರ್ಎಸ್ಸಿ ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಸೇನೆಯ ಹೆಲಿಪ್ಯಾಡ್ ಮತ್ತು ನರಸಿಂಹ ದೇವಸ್ಥಾನ ಸೇರಿದಂತೆ ಇಡೀ ಪಟ್ಟಣವನ್ನು ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.

ಇಸ್ರೋದ ಪ್ರಾಥಮಿಕ ವರದಿಯ ಆಧಾರದ ಪ್ರಕಾರ, 2022ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಮಿಯ ಕುಸಿತ ನಿಧಾನವಾಗಿ ಆರಂಭಗೊಂಡಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಕುಸಿದಿತ್ತು.

ಆದರೆ 2022ರ ಡಿಸೆಂಬರ್ 27 ರಿಂದ 2023 ಜನವರಿ 8ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳ ಅಂತರದಲ್ಲಿ ಪಟ್ಟಣ 5.4 ಸೆಂ.ಮೀ ನಷ್ಟು ಕುಸಿದಿದೆ. ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ನಾಶವಾಗಲಿದೆ ಎಂದು ಆತಂಕಕಾರಿ ವರದಿ ನೀಡಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ