ರಾಜ್ಯ ಸರಕಾರದಿಂದ ಲೂಟಿ ಭಾಗ್ಯ: ಪ್ರಲ್ಹಾದ ಜೋಶಿ ಆರೋಪ

ಶುಕ್ರವಾರ, 30 ಮಾರ್ಚ್ 2018 (13:57 IST)
ಗೋಲ್ಮಾಲ್ ಮಾಡಲು ಅನಿಲಭಾಗ್ಯ ಯೋಜನೆ ಜಾರಿಗೆ ತರಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. 
ಒಂದು ಕನೆಕ್ಷನ್‌ಗೆ 3700 ರೂಪಾಯಿ ಆಗುತ್ತದೆ. ರಾಜ್ಯ ಸರ್ಕಾರ 4500ರೂಪಾಯಿಗೆ ಗುತ್ತಿಗೆ ನೀಡಿದೆ. ಎಮ್‌ಎಸ್‌ಐಎಲ್ ಮೂಲಕ ಲಕ್ಷಾಂತರ ಸ್ಟೋವ್ ಖರೀದಿಸಲಾಗಿದೆ. ರಾಜ್ಯ ಸರ್ಕಾರದ್ದು ಅನಿಲ ಭಾಗ್ಯವಲ್ಲ ಲೂಟಿ ಭಾಗ್ಯ ಎಂದು ವ್ಯಂಗ್ಯವಾಡಿದ್ದಾರೆ. 
 
ಎಷ್ಟು ಹಣಕ್ಕೆ ಸ್ಟೋವ್ ಖರೀದಿ ಮಾಡಲಾಗಿದೆ? ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಜನರಿಗೆ ಸ್ಟೋವ್ ವಿತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದರು. 
 
ಚುನಾವಣಾ ಆಯೋಗ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಬೆದರಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಸ್ಟೇಷನ್‌ಗೆ ಬಂದು ಸಹಿ ಮಾಡುವಂತೆ ಸೂಚಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ ಪೊಲೀಸರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 
 
ಬಿಜೆಪಿ ಕಾರ್ಯಕರ್ತರು ಸಹಿ ಮಾಡಲು ಪೊಲೀಸ್ ಠಾಣೆಗೆ ಹೋಗಬಾರದು. ಈ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಕರೆ ನೀಡುತ್ತೇನೆ. ಪೊಲೀಸರಿಗೆ ತಾಕತ್ತಿದ್ದರೆ ಬಂಧಿಸಲಿ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ