ಬೆಂಗಳೂರು: ರಾಜ್ಯ ಬಜೆಟ್ ಘೋಷಿಸಿದ ಬೆನ್ನಲ್ಲೇ ಹೊಸ ಹೊಸ ಯೋಜನೆಗಳು, ಅನುದಾನಗಳಿಗಾಗಿ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ.
ಆದರೆ ಹೊಸ ಹೊಸ ಯೋಜನೆಗಳಿಗಾಗಿ ಸಾವಿರಾರು ಕೋಟಿ ರೂ. ತೊಡಗಿಸಿಕೊಳ್ಳುವಾಗ ರಾಜ್ಯದ ಸಾಲದ ಮೂಟೆಯೂ ಹೆಚ್ಚಾಗುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಸಾಲ ಮಾಡುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ ಎಂದು ದೂರಿದ್ದ ಸಿಎಂ ಕುಮಾರಸ್ವಾಮಿ ಇಂದು ತಾವೂ ಅದೇ ಹಾದಿಯಲ್ಲಿ ತೊಡಗಿದ್ದಾರೆ.
ಈ ವರ್ಷ 47,137 ಕೋಟಿ ರೂ. ಸಾಲ ಮಾಡುವ ಪ್ರಸ್ತಾಪವನ್ನು ಬಜೆಟ್ ನಲ್ಲಿ ಇಟ್ಟಿದ್ದಾರೆ. ಇದರೊಂದಿಗೆ ರಾಜ್ಯದ ಒಟ್ಟು ಸಾಲ ಈ ವರ್ಷದ ಅಂತ್ಯಕ್ಕೆ 2,92,220 ಕೋಟಿ ರೂ.ಗೆ ಏರಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಇದು ಒಟ್ಟು ಆಂತರಿಕ ಉತ್ಪನ್ನದ ಶೇ. 20. 75 ರಷ್ಟೇ ಆದರೂ, ಈ ರೀತಿ ದಿನೇ ದಿನೇ ಸಾಲದ ಪ್ರಮಾಣ ಏರಿಕೆಯಾಗುತ್ತಿದ್ದರೆ, ಆದಾಯದ ಪ್ರಮಾಣ ಸಹಜವಾಗಿಯೇ ಕಮ್ಮಿಯಾಗಬಹುದು. ಇದು ರಾಜ್ಯದ ಆರ್ಥಿಕತೆ ಮೇಲೆ ಹೊಡೆತ ಬೀರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.