ಕೇದಾರನಾಥ ಯಾತ್ರೆ ಸ್ಥಗಿತ!

ಮಂಗಳವಾರ, 24 ಮೇ 2022 (14:41 IST)
ಡೆಹರಾಡೂನ್ : ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತಗೊಳಿಸಲಾಗಿದ್ದು, ದೇಗುಲಕ್ಕೆ ತೆರಳುವ ಭಕ್ತರು ಗೌರಿಕುಂಡ್ ಮತ್ತು ಕೇದಾರನಾಥ ನಡುವೆ ವಿವಿಧ ಸ್ಥಳಗಳಲ್ಲಿ ಸ್ಥಗಿತಗೊಂಡಿರುವ ಘಟನೆ ನಡೆದಿದೆ.
 
ಕೇದಾರನಾಥದಲ್ಲಿ ಮಳೆ ಹಾಗೂ ಹಿಮಪಾತ ಅಧಿಕವಾಗುತ್ತಿದೆ. ಇದರಿಂದಾಗಿ ಯಾತ್ರೆಯ ಜೊತೆಗೆ ಫಾಟಾ ಮತ್ತು ಗೌರಿಕುಂಡ್ನಿಂದ ಹೆಲಿಕಾಪ್ಟರ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

2013ರ ಕೇದಾರನಾಥ ಪ್ರಳಯದ ದುರಂತದ ಹಿನ್ನೆಲೆಯಲ್ಲಿ ಜಾಗೃತರಾಗಿರುವ ರುದ್ರಪ್ರಯಾಗ ಜಿಲ್ಲಾಡಳಿತವು ಯಾತ್ರಾರ್ಥಿಗಳಿಗೆ ಹವಾಮಾನ ಸುಧಾರಿಸುವವರೆಗೆ ಆಯಾ ನಿಲ್ದಾಣಗಳಲ್ಲಿ ಇರುವಂತೆ ಮನವಿ ಮಾಡಿದ್ದಾರೆ.

ಕೇದಾರನಾಥದಲ್ಲಿರುವ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಜನರನ್ನು ಹಿಂದಿರುಗುವ ಪ್ರಯಾಣವನ್ನು ನಿಲ್ಲಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ