ಕೊಡಗು- ಕೇರಳ ಹೈ ಅಲರ್ಟ್!

ಭಾನುವಾರ, 28 ನವೆಂಬರ್ 2021 (15:18 IST)
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಿರ್ದೇಶನ ಹಿನ್ನಲೆ ಕೊಡಗು-ಕೇರಳ ಗಡಿಯಲ್ಲಿ ಹೈ-ಅಲರ್ಟ್ ಸೂಚಿಸಲಾಗಿದೆ.
ಕೊಡಗಿನ ಗಡಿ ಕರಿಕೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ಬಿಗಿ ಭದ್ರತೆ ಮಾಡುವಂತೆ ಹೇಳಲಾಗಿದೆ. ಗಡಿ ದಾಟಿ ಬರುವವರಿಗೆ ಕೊರೊನಾ ಆರ್ಟಿಪಿಸಿಆರ್ ಕಡ್ಡಾಯ ಇರಲಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ. ಕೊರೊನಾದ ಬೆನ್ನಲ್ಲೇ ಕೇರಳ ರಾಜ್ಯದ 16 ಜನರಲ್ಲಿ ನೋರೋ ವೈರಸ್ ಪತ್ತೆ ಆಗಿದೆ. ಹೀಗಾಗಿ, ವಾಂತಿ, ಭೇದಿ, ಜ್ವರ ಲಕ್ಷಣವಿದ್ದವರ ತಪಾಸಣೆ ನಡೆಸಲಾಗುತ್ತಿದೆ. ಈವರೆಗೆ ಕೊಡಗಿನಲ್ಲಿ ನೋರೊ ರೋಗದ ಲಕ್ಷಣ ಕಾಣಿಸಿಕೊಂಡಿಲ್ಲ ಎಂದು ತಿಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ