ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,59,632 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ.
ಇದು ನಿನ್ನೆಯ ಪ್ರಕರಣಗಳಿಗಿಂತ ಶೇ.12.4 ರಷ್ಟು ಹೆಚ್ಚಾಗಿದೆ ಎಂದು ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ವರದಿ ತಿಳಿಸಿದೆ.
ಅತೀ ಹೆಚ್ಚು ಕೋವಿಡ್ ಕೇಸ್ಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. 41,434 ಕೇಸ್ಗಳು ಮಹಾರಾಷ್ಟ್ರದಲ್ಲಿ, ದೆಹಲಿ – 20,181, ಪಶ್ಚಿಮ ಬಂಗಾಳ – 18,802, ತಮಿಳುನಾಡು – 10,978, ಕರ್ನಾಟಕ – 8,906 ಪ್ರಕರಣಗಳು ದಾಖಲಾಗಿವೆ. ದೇಶಾದ್ಯಂತ ದಾಖಲಾದ ಪ್ರಕರಣಗಳಲ್ಲಿ ಶೇ.62 ರಷ್ಟು ಪಾಲನ್ನು ಈ 5 ರಾಜ್ಯಗಳೇ ಹೊಂದಿದೆ.
1,59,632 ಹೊಸ ಪ್ರಕರಣಗಳು ವರದಿಯಾಗಿವೆ. 3,623 ಕೊರೊನಾ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿವೆ. ಹೀಗೆ ದೇಶದಲ್ಲಿ 5,90,611 ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 327 ಜನರು ಕೋವಿಡ್-19ಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು ಸಾವಿನ ಪ್ರಕರಣಗಳು 4,83,790ಕ್ಕೆ ಏರಿವೆ.