ಮಗಳ ಜತೆಗೆ ಹುಡುಗನನ್ನು ನೋಡಿ ಆಕೆಯ ತಂದೆ ಮಾಡಿದ್ದನ್ನು ಕೇಳಿದ್ರೆ ಶಾಕ್ ಆಗ್ತೀರಾ!

ಶುಕ್ರವಾರ, 21 ಸೆಪ್ಟಂಬರ್ 2018 (06:49 IST)
ಗೋರಖ್ ಪುರ : ಮಗಳ  ಜೊತೆ ಹುಡುಗನೊಬ್ಬನನ್ನು ಕಂಡ ಆಕೆಯ ತಂದೆ ಹುಡುಗನಿಗೆ ಮನಬಂದಂತೆ ಥಳಿಸಿದಲ್ಲದೇ ಆತನ ಮರ್ಮಾಂಗವನ್ನು ಕತ್ತರಿಯಿಂದ ಕತ್ತರಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.


ದೀಪ್​ಚಂದ್​ ಗುಪ್ತಾ ಹಲ್ಲೆಗೊಳಗಾದ 11ನೇ ತರಗತಿ ವಿದ್ಯಾರ್ಥಿ. ಹುಡುಗಿ ಹಾಗೂ ದೀಪ್​ಚಂದ್​ ನಡುವೆ ಬಹಳ ಕಾಲದಿಂದ ಸಂಬಂಧವಿತ್ತು. ಇದಕ್ಕೆ ಅಡ್ಡಿಪಡಿಸಿದ್ದ ಹುಡುಗಿ ಪೋಷಕರು, ದೀಪ್​ಚಂದ್​ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಮತ್ತೊಮ್ಮೆ ಆತನನ್ನು ಹುಡುಗಿಯ ಜೊತೆಗೆ ಕಂಡಾಗ ಆಕೆಯ ತಂದೆ ಹಾಗೂ ಇಬ್ಬರು ಸಹೋದರು ಆಕ್ರೋಶಗೊಂಡು ಹುಡುಗನನ್ನು ಹಿಗ್ಗಾಮಗ್ಗಾ ಥಳಿಸಿದ್ದಲ್ಲದೇ  ಕತ್ತರಿಯಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದ ಹುಡುಗನನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಲಾಯಿತು. ಇದೀಗ ಹುಡುಗನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಖನೌದ SGPGI ಆಸ್ಪತ್ರೆಗೆ ರೆಫರ್​ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ