ಮೋದಿ ಪ್ರಚಾರಕ್ಕೆ ಹೋದ್ರೆ ಬಿಜೆಪಿ ಗೆಲ್ಲುತ್ತೆ, ರಾಹುಲ್ ಹೋದ್ರೆ ಕಾಂಗ್ರೆಸ್ ಸೋಲುತ್ತೆ: ಈಶ್ವರಪ್ಪ

ಶನಿವಾರ, 24 ಮಾರ್ಚ್ 2018 (16:02 IST)
ಬೆಳಗಾವಿಯಲ್ಲಿ ಭಾರತೀಯ ಜನತಾ ‌ಪಾರ್ಟಿ ಬೆಳಗಾವಿ ಮಹಾನಗರ ಜಿಲ್ಲೆ ವತಿಯಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಅವರು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು, ದೇಶದಲ್ಲಿ ಇತ್ತಿಚಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತೆ ಕಾಂಗ್ರೆಸ್ ಗೆಲ್ಲುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಎಲ್ಲೆಲ್ಲಿ ಪ್ರಧಾನಿ‌ ನರೇಂದ್ರ ಮೊದಿ ಅವರು ಪ್ರಚಾರಕ್ಕೆ ಹೋದರೊ ಅಲ್ಲೆಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, ಎಲ್ಲೆಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ್ರೊ ಅಲ್ಲೆಲ್ಲಿ ಕಾಂಗ್ರೆಸ್ ಸೊಲನ್ನ‌ ಅನುಭವಿಸಿದೆ ಎಂದು ಟೀಕಾ ಪ್ರಹಾರ ನಡೆಸಿದರು.
 
ಇತ್ತೀಚಿಗೆ ರಾಜ್ಯದಲ್ಲಿ ನಡೆದ ಕೊಲೆಗಳ ಬಗ್ಗೆ ತೀವ್ರ ಗರಂ ಆಗಿ ಸಿಎಂ ವಿರುದ್ಧ ಹರಿಹಾಯ್ದು, ಆರ್.ಎಸ್.ಎಸ್ ಬಗ್ಗು ಬಡಿತೆನೆ ಎಂದು ಹೇಳುವ ಸಿದ್ದರಾಮಯ್ಯ ಇಲ್ಲಿವರೆಗೆ ಯಾರಿಂದನು ಆಗದ ಕೆಲಸ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ವ್ಯಂಗವಾಗಿ ನುಡಿದರು.
 
ಇನ್ನು ಹಿಂದುಳಿದ ಸಮಾಜ ಸಾಮಾಜಿಕವಾಗಿ ಹಿಂದುಳಿದಿದ್ದು ಕಾಂಗ್ರೆಸ್ ಸರಕಾರ ಕೇವಲ‌ ಮತ ಬ್ಯಾಂಕ್ ರಾಜಕರಣ ಮಾಡುವುದು ಬಿಟ್ಟರೆ ಇನ್ನೆನು ಮಾಡಿಲ್ಲ ಆದ್ದರಿಂದ ಈ ಬಾರಿ ಹಿಂದುಳಿದ ವರ್ಗದ ಜನ ಬಿಜೆಪಿ ಕಡೆ ಒಲವು ತೋರುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ