ಆಷಾಢ ಮಾಸದಲ್ಲಿ ದರ್ಶನಕ್ಕೆ ನ್ಯೂ ರೂಲ್ಸ್?

ಬುಧವಾರ, 22 ಜೂನ್ 2022 (15:27 IST)
ಮೈಸೂರು : ಇನ್ನೇನು ಕೆಲವೇ ದಿನಗಳಲ್ಲಿ ಆಷಾಢ ಮಾಸ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಹೊಸ ನಿಯಮ ತರಲಾಗುತ್ತಿದೆ.
 
ಜುಲೈ 1 ರಿಂದ ಆಷಾಢ ಮಾಸ ಆರಂಭವಾಗುವ ಕಾರಣ ಈ ಮಾಸದಲ್ಲಿ ಮೈಸೂರಿನ ಚಾಮುಂಡಿ ತಾಯಿಯ ದರ್ಶನಕ್ಕೆ ಲಕ್ಷಾಂತರ ಜನ ಬರುತ್ತಾರೆ.

ಕೋವಿಡ್ ನಿಧಾನವಾಗಿ ಏರಿಕೆ ಆಗುತ್ತಿರುವ ಕಾರಣ ಹೊಸ ನಿಬಂಧನೆಗಳನ್ನು ಜಾರಿಗೆ ತರಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ. 

ಚಾಮುಂಡಿ ತಾಯಿಯ ದರ್ಶನಕ್ಕೆ ಬರುವವರಿಗೆ ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು. ಲಸಿಕೆ ಹಾಕಿಸಿಕೊಂಡಿರದಿದ್ದರೆ ದರ್ಶನಕ್ಕೆ ಬರುವ 72 ಗಂಟೆ ಮುಂಚೆ ಕೋವಿಡ್ ಟೆಸ್ಟ್ ಮಾಡಿಸಿರಬೇಕು.

ಈ ಬಗ್ಗೆ ಇನ್ನೂ ಕೆಲವು ರೂಲ್ಸ್ ಗಳ ಬಗ್ಗೆ ಜೂನ್ 25 ರಂದು ಸಭೆ ನಡೆಸಿ ತೀರ್ಮಾನ ಕೈ ಗೊಳ್ಳಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ