ಮದುವೆ ಪಾರ್ಟಿಯಲ್ಲಿ ಕೇಕ್ ಕತ್ತರಿಸುವಂತಿಲ್ಲ, ಮದುಮಗ ಗಡ್ಡ ಬಿಡುವಂತಿಲ್ಲ!

ಗುರುವಾರ, 11 ನವೆಂಬರ್ 2021 (11:50 IST)
ಕೊಡಗು : ಕೊಡಗು ಪ್ರವಾಸಿ ತಾಣಗಳ  ತವರೂರು ಅಷ್ಟೇ ಅಲ್ಲ. ಕೊಡವರ ಆಚಾರ ವಿಚಾರಗಳು ಕೂಡ ಅತೀ ವಿಶಿಷ್ಟ.
ಆದರೆ ಇತ್ತೀಚೆಗೆ ಕೊಡವರ ವಿವಾಹ ಸಮಾರಂಭಗಳಲ್ಲಿ ಕೆಲವರು ಕೇಕ್ ಕತ್ತರಿಸುವುದು, ಶಾಂಪೆನ್ ಹಾರಿಸೋದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದು ಕೊಡವ ಸಂಸ್ಕೃತಿಗೆ ಧಕ್ಕೆ ತರುವ ಆತಂಕ ಎದುರಾಗಿದೆ. ಹೀಗಾಗಿಯೇ ಕೊಡಗಿನ ಪೊನ್ನಂಪೇಟೆ ಕೊಡವ ಸಮಾಜ ಮತ್ತು ವಿರಾಜಪೇಟೆ ಕೊಡವ ಸಮಾಜಗಳು ವಿವಾಹ ಸಮಾರಂಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೆನ್ ಹಾರಿಸೋದನ್ನು ನಿಷೇಧಿಸಿವೆ. ಇತ್ತೀಚೆಗೆ ಸಭೆ ನಡೆಸಿರುವ ಎರಡು ಸಮಾಜಗಳು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿರುವುದು ಒಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದ್ದರೆ, ಸಾಕಷ್ಟು ಜನರು ಇದು ಅತ್ಯಂತ ಒಳ್ಳೆಯ ನಿರ್ಧಾರ ಎಂದಿದ್ದಾರೆ. ಇನ್ನು ಮುಂದೆ ಒಂದು ವೇಳೆ ವಿವಾಹದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೆನ್ ಹಾರಿಸೋದನ್ನು ಮಾಡಿದ್ರೆ ಅಂತಹ ಮದುವೆಗಳಿಗೆ ಬ್ರೇಕ್ ಹಾಕಲಾಗುತ್ತದೆ ಎನ್ನೋ ಎಚ್ಚರಿಕೆಯನ್ನು ಎರಡು ಕೊಡವ ಸಮಾಜಗಳು ನೀಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ