ನವದೆಹಲಿ : ಹಳೆಯ 100 ರೂ. ನೋಟು ನಿಷೇಧಗೊಳ್ಳಲಿದೆ ಎಂಬ ಸುದ್ದಿಯನ್ನು ದಯವಿಟ್ಟು ಶೇರ್ ಮಾಡಬೇಡಿ.
ದೇಶದಲ್ಲಿ ಈಗ ಚಲಾವಣೆಯಾಗುತ್ತಿರುವ ಹಳೆಯ 100, 10, ಮತ್ತು 5 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಈ ಸುದ್ದಿ ನಕಲಿ ಆಗಿದ್ದು ಇಲ್ಲಿಯವರೆಗೆ ಆರ್ಬಿಐ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. 100 ರೂಪಾಯಿ ಹಳೆಯನೋಟುಗಳ ಚಲಾವಣೆ ಸ್ಥಗಿತಗೊಳಿಸಿ ಹೊಸ ಸೀರಿಸ್ನ ನೋಟುಗಳನ್ನು ಚಲಾವಣೆಗೆ ತರಲಾಗುವುದು.
ಹಾಗಾಗಿ ಹಳೆಯ ನೋಟುಗಳ ಮುದ್ರಣ ಸ್ಥಗಿತಗೊಳಿಸಿ ಹಳೆಯ ನೋಟುಗಳನ್ನು ಹಂತಹಂತವಾಗಿ ಬ್ಯಾಂಕ್ಗಳ ಮೂಲಕ ಹಿಂಪಡೆಯಲಾಗುತ್ತಿದೆ ಎಂದು ಪೋಸ್ಟ್ನಲ್ಲಿದೆ. ಈ ಬಗ್ಗೆ ಈ ಹಿಂದೆಯೇ ಪಿಐಬಿ ಫ್ಯಾಕ್ಟ್ ಚೆಕ್ ಇದು ಸುಳ್ಳು ಸುದ್ದಿ. ಹಳೆಯ 100 ನೋಟು ಅಮಾನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
2018ರಲ್ಲಿ ಹೊಸ 100 ರೂಪಾಯಿ ಮುಖಬೆಲೆಯ ನೋಟುಗಳು ಹೊಸ ಬಣ್ಣದಿಂದ ಚಲಾವಣೆಗೆ ಬಂದಿದೆ. ಈ ನೋಟುಗಳ ಜೊತೆಗೆ ಹಳೆಯ ಮುಖ ಬೆಲೆಯ ನೋಟುಗಳು ಮುಂದುವರಿಯುತ್ತದೆ ಎಂದು ಆರ್ಬಿಐ ಈ ಹಿಂದೆ ತಿಳಿಸಿತ್ತು.